logo
HT ಕನ್ನಡ' ನಿಮಗೆ ನೋಟಿಫಿಕೇಶನ್ ಕಳಿಸಲಿದೆ. ಸಬ್‌ಸ್ಕ್ರೈಬ್ ಮಾಡಲು ಸರಿ ಕ್ಲಿಕ್ ಮಾಡಿ.
ಕನ್ನಡ ಸುದ್ದಿ  /  ಮನರಂಜನೆ  /  Indian 2 Trailer: ಇಂಡಿಯನ್‌ 2 ಸಿನಿಮಾದ ಟ್ರೇಲರ್‌ ಇಂದು ಬಿಡುಗಡೆ; ಇಂಡಿಯನ್‌ ತಾತನ ನೋಡಲು ಸಜ್ಜಾಗಿ

Indian 2 Trailer: ಇಂಡಿಯನ್‌ 2 ಸಿನಿಮಾದ ಟ್ರೇಲರ್‌ ಇಂದು ಬಿಡುಗಡೆ; ಇಂಡಿಯನ್‌ ತಾತನ ನೋಡಲು ಸಜ್ಜಾಗಿ

Praveen Chandra B HT Kannada

Jun 25, 2024 04:55 PM IST

Indian 2 Trailer: ಇಂಡಿಯನ್‌ 2 ಸಿನಿಮಾದ ಟ್ರೇಲರ್‌ ಇಂದು ಬಿಡುಗಡೆ

    • Indian 2 Trailer: ಇಂಡಿಯನ್‌ ಫ್ರಾಂಚೈಸ್‌ನ ಬಹುನಿರೀಕ್ಷಿತ ಎರಡನೇ ಸಿನಿಮಾ "ಇಂಡಿಯನ್‌ 2". ಈ ಸಿನಿಮಾವು ಜುಲೈ 2024 ಅಂದ್ರೆ, ಮುಂದಿನ ತಿಂಗಳು ರಿಲೀಸ್‌ ಆಗಲಿದೆ.  ಇಂಡಿಯನ್‌ 2 ಟ್ರೇಲರ್‌ ಇಂದು (ಜೂನ್‌ 25) ರಾತ್ರಿ 7 ಗಂಟೆಗೆ ರಿಲೀಸ್‌ ಆಗಲಿದೆ. 
Indian 2 Trailer: ಇಂಡಿಯನ್‌ 2 ಸಿನಿಮಾದ ಟ್ರೇಲರ್‌ ಇಂದು ಬಿಡುಗಡೆ
Indian 2 Trailer: ಇಂಡಿಯನ್‌ 2 ಸಿನಿಮಾದ ಟ್ರೇಲರ್‌ ಇಂದು ಬಿಡುಗಡೆ

Indian 2 Trailer: ಇಂಡಿಯನ್‌ ಫ್ರಾಂಚೈಸ್‌ನ ಬಹುನಿರೀಕ್ಷಿತ ಎರಡನೇ ಸಿನಿಮಾ "ಇಂ��ಿಯನ್‌ 2". ಈ ಸಿನಿಮಾವು ಜುಲೈ 2024 ಅಂದ್ರೆ, ಮುಂದಿನ ತಿಂಗಳು ರಿಲೀಸ್‌ ಆಗಲಿದೆ. ಕಮಲ್‌ ಹಾಸನ್‌ ಮತ್ತು ಹಿರಿಯ ಸಿನಿಮಾ ನಿರ್ದೇಶಕ ಶಂಕರ್‌ ಅವರು ಜೊತೆಗೂಡಿ ಸಿದ್ಧಪಡಿಸಿದ ಎರಡನೇ ಸಿನಿಮಾವಾಗಿದೆ. ಇದೀಗ ಈ ಇಂಡಿಯನ್‌ 2 ತಂಡವು ಇಂದು ರಾತ್ರಿ 7 ಗಂಟೆಗೆ ಮುಂಬೈನಲ್ಲಿ ನಡೆಯುವ ಅದ್ಧೂರಿ ಕಾರ್ಯಕ್ರಮದಲ್ಲಿ ಇಂಡಿಯನ್‌ 2 ಟ್ರೇಲರ್‌ ಬಿಡುಗಡೆ ಮಾಡಲು ಸಜ್ಜಾಗಿದೆ.

ಟ್ರೆಂಡಿಂಗ್​ ಸುದ್ದಿ

Korean Movie: ಒಟಿಟಿಗೆ ಬಂತು ಥ್ರಿಲ್ಲರ್‌ ಹಾರರ್‌ ಕೊರಿಯನ್‌ ಸಿನಿಮಾ; ಬೆನ್ನ ಹುರಿಯಲ್ಲಿ ನಡುಕ ತರಿಸೋ ಭಯಾನಕ ಚಿತ್ರದ ಮಾಹಿತಿ

ಜುಲೈ 2ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ, ಮುಂದಿನ ವರ್ಷ ನೋಡೋಣ ಎಂದ ಗೋಲ್ಡನ್‌ ಸ್ಟಾರ್‌ ಗಣೇಶ್‌; ಕಾರಣವೇನು?

ಮಾಣಿಕ್ಯ ನಟಿ ವರಲಕ್ಷ್ಮಿ ಶರತ್‌ ಕುಮಾರ್‌ಗೆ ಜುಲೈ 2ರಂದು ಶುಭ ವಿವಾಹ; ಪ್ರಧಾನಿ ಮೋದಿಗೆ ಖುದ್ದಾಗಿ ಆಮಂತ್ರಣ ಪತ್ರ ತಲುಪಿಸಿದ ರನ್ನನ ಚೆಲುವೆ

ನಾನು ಚಪ್ಪಲಿಯಿಂದ ಹೊಡೆದೆ, ಆದರೆ ದರ್ಶನ್‌ ಮನಬಂದಂತೆ ಥಳಿಸಿದ್ರು! ಖಾಕಿ ಮುಂದೆ ದಚ್ಚು ವಿರುದ್ಧವೇ ಪವಿತ್ರಾ ಗೌಡ ಹೇಳಿಕೆ

ಇಂಡಿಯನ್‌ 2 ಟ್ರೇಲರ್‌ನಲ್ಲಿ ಏನು ನಿರೀಕ್ಷಿಸಬಹುದು?

ಈ ಸಿನಿಮಾದಲ್ಲಿ ಕಮಲ್‌ ಹಾಸನ್‌ ಅವರು ಐಕಾನಿಕ್‌ ಪಾತ್ರ "ಸೇನಾಪತಿ"ಯಾಗಿ ಮಿಂಚಲಿದ್ದಾರೆ. ಇಂಡಿಯನ್‌ 2 ಟ್ರೇಲರ್‌ನಲ್ಲಿ ವೀರಕ್ಷರ ಸೇನಾಪತಿ ಅಕಾ ಇಂಡಿಯನ್‌ ಪಾತ್ರದ ಕುರಿತು ಹೆಚ್ಚಿನ ವಿವರ ಇರುವ ನಿರೀಕ್ಷೆಯಿದೆ. ಇದು ಕಮಲ್‌ ಹಾಸನ್‌ ಪಾತ್ರ. ಇಂಟ್ರೋ ವಿಡಿಯೋದಂತೆ ಇರದೆ ಟ್ರೇಲರ್‌ನಲ್ಲಿ ಇಂಡಿಯನ್‌ 2 ನ ಕುರಿತು ಹೆಚ್ಚಿನ ಮಾಹಿತಿ ದೊರಕುವ ಸಾಧ್ಯತೆ ಇದೆ.

ಈಗಾಗಲೇ ಇಂಡಿಯನ್‌ 2 ಸಿನಿಮಾದ ಇಂಟ್ರೋ ವಿಡಿಯೋ ಬಿಡುಗಡೆಯಾಗಿದೆ. ವೀಕ್ಷಕರಿಗೆ ಈಗಿನ ಭಾರತದ ಚಿತ್ರಣ ಮತ್ತು ವಿದೇಶದಲ್ಲಿ ವಾಸಿಸುತ್ತಿದ್ದ ಸೇನಾಪತಿ ಭಾರತಕ್ಕೆ ಬರುವಂತಾಗಲು ಕಾರಣವಾದ ಅಂಶದ ಕುರಿತು ಸುಳಿವು ದೊರಕಿತ್ತು. ಈ ದಿನ ಬಿಡುಗಡೆಯಾಗುವ ಇಂಡಿಯನ್‌ 2 ಟ್ರೇಲರ್‌ನಲ್ಲಿ ಈ ಜಗತ್ತಿನ ಕುರಿತು ಹೆಚ್ಚಿನ ವಿವರದೊಂದಿಗೆ ಉಳಿದ ಪಾತ್ರಗಳ ಝಲಕ್‌ ನೀಡುವ ಸೂಚನೆಯಿದೆ. ಹೀಗಿದ್ದರೂ ಟ್ರೇಲರ್‌ನಲ್ಲಿ ಚಿತ್ರದ ಕಥೆಯ ಕುರಿತು ಸ್ಪಷ್ಟ ಸುಳಿವು ದೊರಕುವ ಸಾಧ್ಯತೆ ಇಲ್ಲ ಎಂದು ಸಿನಿಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

ಈ ಸಿನಿಮಾದಲ್ಲಿ ಚಿತ್ರ ವರದರಾಜನ್‌ ಆಗಿ ಸಿದ್ಧಾರ್ಥ್‌ ನಟಿಸಿದ್ದಾರೆ. ಕಮಲ್‌ ಹಾಸನ್‌ ಅವರ ವೀರಶೇಖರನ್‌ ಸೇನಾಪತಿಯಷ್ಟೇ ಪ್ರಮುಖ ಪಾತ್ರ ಸಿದ್ಧಾರ್ಥ್‌ಗೂ ಇರುವ ನಿರೀಕ್ಷೆಯಿದೆ. ರಕುಲ್‌ ಪ್ರೀತ್‌ ಸಿಂಗ್‌ ಅವರು ಚಿತ್ರಾ ಪಾತ್ರದಲ್ಲಿ ಕಾಣಿಸಲಿದ್ದಾರೆ. ಈ ಸಿನಿಮಾದಲ್ಲಿ ನೆಡುಮುಡಿ ವೇಣಿ, ವಿವೇಕ್‌, ಮನೋಬಾಲ ಮುಂತಾದವರು ನಟಿಸಿದದಾರೆ. ಜತೆಗೆ, ಸಾಜ್ ಸೂರ್ಯ, ಪ್ರಿಯಾ ಭವಾನಿ ಶಂಕರ್, ಸಮುದ್ರಕನಿ, ದೆಹಲಿ ಗಣೇಶ್, ಗುಲ್ಶನ್ ಗ್ರೋವರ್, ಕಾಳಿದಾಸ್ ಜಯರಾಮ್, ಜೈಪ್ರಕಾಶ್ ಕೂಡ ಇಂಡಿಯನ್‌ 2 ತಾರಾಗಣದಲ್ಲಿದ್ದಾರೆ.

ಈಗಾಗಲೇ ಇಂಡಿಯನ್‌ 2 ಸಿನಿಮಾದ ಟ್ರೇಲರ್‌ ಅನ್ನು ಮಾಧ್ಯಮದ ಮಂದಿಗೆ ಚೆನ್ನೈನಲ್ಲಿ ತೋರಿಸಲಾಗಿದೆ. ಈಗಾಗಲೇ ಇಂಡಿಯನ್‌ 2 ಟ್ರೇಲರ್‌ ನೋಡಿ ಸಾಕಷ್ಟು ಜನರು ವಿಮರ್ಶೆ ಬರೆಯುತ್ತಿದ್ದಾರೆ. ಅನ್ನಿಯನ್‌, 2.0ನಂತಹ ಸಿನಿಮಾಗಳನ್ನು ನೀಡಿರುವ ಶಂಕರ್‌ ಈ ಚಿತ್ರದ ಕುರಿತು ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಇಂಡಿಯನ್‌ 1ನಲ್ಲಿ ಎಲ್ಲಿ ಸಿನಿಮಾದ ಕಥೆ ನಿಂತಿರುವುದೋ ಅಲ್ಲಿಂದಲೇ ಹೊಸ ಕಥೆ ಇಂಡಿಯನ್‌ 2ನಲ್ಲಿ ಆರಂಭವಾಗುವ ನಿರೀಕ್ಷೆಯಿದೆ.

ಈಗಾಗಲೇ ಈ ಟ್ರೇಲರ್‌ ನೋಡಿರುವವರು ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. "ಈಗಾಗಲೇ ಟ್ರೇಲರ್‌ ನೋಡಿದ್ದೇವೆ. ಅದ್ಭುತವಾಗಿದೆ. ಖಂಡಿತಾ ಇದು ಪ್ರೇಕ್ಷಕರಿಗೆ ಇಷ್ಟವಾಗಲಿದೆ" ಎಂದು ಒಬ್ಬರು ಬರೆದಿದ್ದಾರೆ. "ಕಮಲ್‌ ಹಾಸನ್‌ ಅವರನ್ನು ಇಂಡಿಯನ್‌ ತಾತಾ ಆಗಿ ಕಣ್ತುಂಬಿಕೊಳ್ಳಬಹುದು. ವರ್ಮಾ ಕಲೈ ಸಾಹಸ ಪ್ರದರ್ಶನವೂ ಇದೆ. ಇಂದು ಸಂಜೆ 7 ಗಂಟೆಗೆ ಖಂಡಿತವಾಗಿಯೂ ಈ ಟ್ರೇಲರ್‌ ಇಂಟರ್‌ನೆಟ್‌ನಲ್ಲಿ ಧೂಳೆಬ್ಬಿಸಲಿದೆ" ಎಂದು ಇನ್ನೊಬ್ಬರ�� ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ