ಕನ್ನಡ ಸುದ್ದಿ  /  ಮನರಂಜನೆ  /  ರಾಜ್‌- ವಿಷ್ಣು ಬೇಡ, ನಿಮ್ಮಪ್ಪನ ಆದರ್ಶ ರೂಢಿಸಿಕೊಂಡಿದ್ರೆ ನೀನು ಎಲ್ಲೋ ಇರ್ತಿದ್ದೆ; ದರ್ಶನ್‌ ಬಗ್ಗೆ ಸಾರಾ ಗೋವಿಂದು ಬೇಸರ

ರಾಜ್‌- ವಿಷ್ಣು ಬೇಡ, ನಿಮ್ಮಪ್ಪನ ಆದರ್ಶ ರೂಢಿಸಿಕೊಂಡಿದ್ರೆ ನೀನು ಎಲ್ಲೋ ಇರ್ತಿದ್ದೆ; ದರ್ಶನ್‌ ಬಗ್ಗೆ ಸಾರಾ ಗೋವಿಂದು ಬೇಸರ

ದರ್ಶನ್‌ ಅವರನ್ನು ಚಿಕ್ಕಂದಿನಿಂದಲೇ ನೋಡಿಕೊಂಡು ಬಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ನಿರ್ಮಾಪಕ, ತೂಗುದೀಪ ಶ್ರೀನಿವಾಸ್‌ ಅವರ ಆಪ್ತರಲ್ಲೊಬ್ಬರಾದ ಸಾ ರಾ ಗೋವಿಂದು ಇದೀಗ ದರ್ಶನ್‌ ಮುಂಗೋಪಿತನದ ಬಗ್ಗೆ ಮಾತನಾಡಿದ್ದಾರೆ.

ರಾಜ್‌- ವಿಷ್ಣು ಬೇಡ, ನಿಮ್ಮಪ್ಪನ ಆದರ್ಶ ರೂಢಿಸಿಕೊಂಡಿದ್ರೆ ನೀನು ಎಲ್ಲೋ ಇರ್ತಿದ್ದೇ; ದರ್ಶನ್‌ ಬಗ್ಗೆ ಸಾರಾ ಗೋವಿಂದು ಬೇಸರ
ರಾಜ್‌- ವಿಷ್ಣು ಬೇಡ, ನಿಮ್ಮಪ್ಪನ ಆದರ್ಶ ರೂಢಿಸಿಕೊಂಡಿದ್ರೆ ನೀನು ಎಲ್ಲೋ ಇರ್ತಿದ್ದೇ; ದರ್ಶನ್‌ ಬಗ್ಗೆ ಸಾರಾ ಗೋವಿಂದು ಬೇಸರ

Sa ra Govindu on Darshan Thoogudeepa: ನಟ ದರ್ಶನ್‌ ಕೊಲೆ ಆರೋಪದಲ್ಲಿ ಜೈಲು ಸೇರುತ್ತಿದ್ದಂತೆ, ಇತ್ತ ಅವರ ಬಗ್ಗೆ ಸಾಕಷ್ಟು ಮಂದಿ ಮಾತನಾಡುತ್ತಿದ್ದಾರೆ. ಹೀಗಿರುವಾಗಲೇ ದರ್ಶನ್‌ ಅವರನ್ನು ಚಿಕ್ಕಂದಿನಿಂದಲೇ ನೋಡಿಕೊಂಡು ಬಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ನಿರ್ಮಾಪಕ ಸಾ ರಾ ಗೋವಿಂದು ಇದೀಗ ದರ್ಶನ್‌ ಮುಂಗೋಪಿತನದ ಬಗ್ಗೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸಾ ರಾ ಗೋವಿಂದು ಹೇಳಿದ್ದೇನು?

"ಕನ್ನಡ ಚಿತ್ರರಂಗದಲ್ಲಿ ಹಿರಿಯರು ಒಂದಷ್ಟು ಆದರ್ಶಗಳನ್ನು ಬಿಟ್ಟು ಹೋಗಿದ್ದಾರೆ. ರಾಜ್‌ಕುಮಾರ್‌, ವಿಷ್ಣುವರ್ಧನ್‌, ಶಂಕರ್‌ನಾಗ್‌, ಅಂಬರೀಶ್‌.. ಇಂಥ ಮಹನೀಯರೆಲ್ಲ ಸಾಕಷ್ಟು ಆದರ್ಶಪ್ರಾಯವಾಗಿ ಜೀವಿಸಿದ್ದಾರೆ. ಇವರ ಹತ್ತು ಪರ್ಸೆಂಟ್‌ ಆದ್ರೂ ದರ್ಶನ್‌ ಅಳವಡಿಸಿಕೊಂಡಿದ್ದರೆ ಎಲ್ಲೋ ಇರ್ತಿದ್ದ. ಹೋಗ್ಲಿ ರಾಜ್‌ಕುಮಾರ್‌ ಬೇಡ, ವಿಷ್ಣುವರ್ಧನ್‌ ಬೇಡ, ಶಂಕರ್‌ನಾಗ್‌ ಬೇಡ, ಅಂಬರೀಶ್‌ ಬೇಡ.. ಇನ್ನೊಬ್ಬರದ್ದು ಬೇಡ, ಯಾರದ್ದೂ ಬೇಡ. ನಿಮ್ಮನ ಆದರ್ಶ ಅಳವಡಿಸಿಕೊಂಡಿದ್ದರೆ, ತೂಗುದೀಪ ಶ್ರೀನಿವಾಸ್‌ ಅವರ ಗುಣ ರೂಢಿಸಿಕೊಂಡಿದ್ದರೆ ದರ್ಶನ್‌ಗೆ ಈ ಸ್ಥಿತಿ ಬರ್ತಿರಲಿಲ್ಲ"

"ಸ್ಟಾರ್‌ ನಟ ಎನಿಸಿಕೊಂಡರೂ, ಸಾಮಾನ್ಯನಂತೆ ಜೀವನ ಸಾಗಿಸುತ್ತಿದ್ದವರು. ಅವರ ಬಗ್ಗೆ ಹೆಮ್ಮೆ ಇದೆ. ಅವರನ್ನು ತುಂಬ ಹತ್ತಿರದಿಂದ ನೋಡಿದ್ದೇನೆ. ರಾಜ್‌ಕುಮಾರ್‌ ಮತ್ತು ಪಾರ್ವತಮ್ಮನವರ ಮೇಲೆ ತೂಗುದೀಪ ಶ್ರೀನಿವಾಸ್‌ ಮತ್ತವರ ಪತ್ನಿ ಮೀನಾ ಅವರಿಗೂ ಅಪಾರ ಗೌರವ. ಇವರಿಬ್ಬರ ಹೆಸರನ್ನೇ ಅವರ ಮನೆಗೆ ಇರಿಸಿಕೊಂಡಿದ್ದರು ತೂಗುದೀಪ ಶ್ರೀನಿವಾಸ್. ಅವರ ನಡುವಿನ ಆ ಪ್ರೀತಿ, ವಿಶ್ವಾಸ ನೋಡಿದರೆ, ನನಗೆ ಅನಿಸೋದು ಯಾಕೆ ದರ್ಶನ್‌ ಹೀಗಾದ ಅನಿಸುತ್ತೆ"

ದೊಡ್ಮನೆ ಯಾವತ್ತಿದ್ದರೂ ಅದು ದೊಡ್ಮನೆ

"ದರ್ಶನ್‌ ಲೈಟ್‌ ಬಾಯ್‌ ಹೌದು. ಕ್ಯಾಮರಾ ಅಸಿಸ್ಟಂಟ್‌ ಅಲ್ಲ. ಅಷ್ಟೊಂದು ತಿಳಿವಳಿಕೆ ಆ ಸಮಯದಲ್ಲಿ ದರ್ಶನ್‌ಗೆ ಇರಲಿಲ್ಲ. ರಾಜ್‌ಕುಮಾರ್‌ ಇಷ್ಟಪಟ್ಟು ತಂದ ಕಾಸ್ಟ್ಲೀ ಕ್ಯಾಮರಾ ಅದು. ಆ ಕ್ಯಾಮರಾ ತಂದಾಗ ಇವರ್ಯಾರು ಇರಲಿಲ್ಲ. ಇನ್ನು ದರ್ಶನ್‌ ಮತ್ತು ದೊಡ್ಮನೆ ವಿಚಾರವನ್ನು ನಾನು ಮಾತನಾಡಲಾರೆ. ದೊಡ್ಮನೆ ಯಾವತ್ತಿದ್ದರೂ ಅದು ದೊಡ್ಮನೆ. ಆ ಮನೆಯಿಂದ ಸಾಕಷ್ಟು ಜನ ಚಿತ್ರರಂಗಕ್ಕೆ ಬಂದಿದ್ದಾರೆ. ಹಾಗೆ ಬಂದ ದಾರಿಯನ್ನು ಯಾವತ್ತೂ ಮರೀಬಾರದು. ಅದರಲ್ಲಿ ನಾನೂ ಒಬ್ಬ"

ರಾಜ್‌-‌ ವಿಷ್ಣುವರ್ಧನ್‌ಗಿಂತ ದರ್ಶನ್‌ ಬೆಳೆದಿದ್ದಾನಾ?

"ದರ್ಶನ್‌ಗೆ ಆ ವಿಚಾರದಲ್ಲಿ ಕೊಂಚ ತಿಳಿವಳಿಕೆ ಕಮ್ಮಿ. ಮುಂಗೋಪಿ. ಏನು ಮಾತನಾಡುತ್ತಿದ್ದೇನೆ ಎಂಬುದನ್ನು ಅರಿತು ಮಾತನಾಡಬೇಕು. ದರ್ಶನ್‌ಗಿಂತ ಮುಂಚೆ ಯಾರೆಲ್ಲ ಬೆಳೆದಿದ್ದರು. ರಾಜ್‌ಕುಮಾರ್-‌ ವಿಷ್ಣುವರ್ಧನ್‌ಗಿಂತ ದರ್ಶನ್‌ ಬೆಳೆದಿದ್ದಾನಾ? ರಜನಿಕಾಂತ್‌, ಅಮಿತಾಬ್‌ ಬಚ್ಚನ್‌ ನಿನ್ನಂತೆ ಆಡಿದ್ರಾ? ಇಂದಿಗೂ ರಾಜ್‌ಕುಮಾರ್‌ ಯಾಕೆ ಎಲ್ಲರ ಎದೆಯಲ್ಲಿದ್ದಾರೆ? ಅವರು ನಡೆದು ಬಂದ ಹಾದಿ ಆ ಥರ ಇತ್ತು. ಅಭಿಮಾನಿಗಳನ್ನು ದೇವರು ಅಂತ ಕರೆದ್ರು. ರಜನಿಕಾಂತ್‌ ಯಾವತ್ತಾದ್ರೂ ಅಹಂ ತೋರಿಸಿದ್ರಾ. ಇವತ್ತಿನ ಈ ಪರಿಸ್ಥಿತಿ ಬರಲು ನಿನ್ನ ಸುತ್ತಲಿನ ಪಟಾಲಂ ಕಾರಣ. ರಾತ್ರಿ ಸೇರುತ್ತೀರಲ್ಲ. ಏನೆನಾಗುತ್ತೆ. ಆ ಪಟಾಲಂ ಮಾಡಿದ್ದಕ್ಕೇ ನೀನೇ ಬಲಿಪಶು ಆಗಿದ್ದೀಯಾ" ಎಂದಿದ್ದಾರೆ ಸಾರಾ ಗೋವಿಂದು.

ಇಟ್ಕೊಂಡವಳಿಗಾಗಿ ಇನ್ನೊಂದು ಜೀವಕ್ಕೆ ಕುತ್ತು

"ನಟ ದರ್ಶನ್‌ ತುಂಬ ಒಳ್ಳೆಯ ಮನುಷ್ಯ. ಮಾನವೀಯತೆಯ ಎಲ್ಲವೂ ಇದೆ. ಯಾಕೆ ಬದಲಾವಣೆ ಆದೆ? ಯಾಕೇ ಈ ಅಹಂ ಬಂತು. ಯಾಕೆ ನಾನೇ ಎಂದೆ? ಒಂದು ಹೆಣ್ಣಿಗೋಸ್ಕರ.. ಅದು ಕಟ್ಕೊಂಡವಳಲ್ಲ, ಇಟ್ಕೊಂಡವಳ ಸಲುವಾಗಿ ಒಂದು ಜೀವಕ್ಕೆ ಕುತ್ತು ತಂದ್ರಲ್ಲ. ಇದನ್ನು ಹೇಗೆ ಸಹಿಸಿಕೊಳ್ಳಲು ಸಾಧ್ಯ. ಸಮಾಜ ಏನು ಹೇಳುತ್ತೆ. ಬೇಕಾದಷ್ಟು ಅಭಿಮಾನಿಗಳು ನಿಮ್ಮ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿದ್ದಾರೆ. ಅದಕ್ಕೆ ಬೆಲೆ ಕಟ್ಟಲು ಸಾಧ್ಯವಾಗುತ್ತ? ಅಷ್ಟು ಹೆಮ್ಮರವಾಗಿ ಬೆಳೆದಿದ್ದೀರಿ, ಯಾಕೆ ಇಷ್ಟು ಅಹಂ ನಿಮಗೆ?" ಎಂದು ಪ್ರಶ್ನೆ ಮಾಡಿದ್ದಾರೆ ಸಾ ರಾ ಗೋವಿಂದು.