ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಅಪರಾಧ ಸುದ್ದಿ; ಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿದ ತಾತ, ಕೇಸ್‌ ಬೀಳುತ್ತಿದ್ದಂತೆ ಪರಾರಿ, ಇತರೆ ಕ್ರೈಂ ನ್ಯೂಸ್

ಬೆಂಗಳೂರು ಅಪರಾಧ ಸುದ್ದಿ; ಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿದ ತಾತ, ಕೇಸ್‌ ಬೀಳುತ್ತಿದ್ದಂತೆ ಪರಾರಿ, ಇತರೆ ಕ್ರೈಂ ನ್ಯೂಸ್

ಬೆಂಗಳೂರು ಅಪರಾಧ ಸುದ್ದಿ; ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿದ ತಾತ, ಕೇಸ್‌ ಬೀಳುತ್ತಿದ್ದಂತೆ ಪರಾರಿಯಾಗಿದ್ದಾನೆ. ಪೊಲೀಸರು ಆರೋಪಿಗಾಗಿ ಶೋಧ ಶುರುಮಾಡಿದ್ದಾರೆ. ಇನ್ನೊಂದೆಡೆ, ಬೆಂಗಳೂರಿಗೆ ಆಗಮಿಸಿದ ರೈಲಿನಲ್ಲಿ 33 ಲಕ್ಷ ರೂಪಾಯಿ ಗಾಂಜಾ ವಶಪಡಿಸಿದ್ದು, ರೈಲ್ವೇ ನೌಕರನೇ ಕಳ್ಳಸಾಗಾಣೆದಾರ. (ವರದಿ - ಎಚ್ ಮಾರುತಿ, ಬೆಂಗಳೂರು)

ಬೆಂಗಳೂರು ಅಪರಾಧ ಸುದ್ದಿ; ಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿದ ತಾತ, ಕೇಸ್‌ ಬೀಳುತ್ತಿದ್ದಂತೆ ಪರಾರಿ, ಇತರೆ ಕ್ರೈಂ ನ್ಯೂಸ್ (ಸಾಂಕೇತಿಕ ಚಿತ್ರ)
ಬೆಂಗಳೂರು ಅಪರಾಧ ಸುದ್ದಿ; ಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿದ ತಾತ, ಕೇಸ್‌ ಬೀಳುತ್ತಿದ್ದಂತೆ ಪರಾರಿ, ಇತರೆ ಕ್ರೈಂ ನ್ಯೂಸ್ (ಸಾಂಕೇತಿಕ ಚಿತ್ರ) (canva)

ಬೆಂಗಳೂರು: ಕಾಮಾತುರಣಂ ನ ಭಯ ನ ಲಜ್ಜಾ ಎಂಬ ನಾಣ್ಣುಡಿ ಪದೇ ಪದೇ ನಿಜವಾಗುವೌಂತಹ ಘಟನೆಗಳು ಸಂಭವಿಸುತ್ತಿದ್ದು, ಕಸಿವಿಸಿಯನ್ನುಂಟು ಮಾಡುತ್ತಿವೆ. ಬೆಂಗಲೂರಿನ ಹುಳಿಮಾವು ಪ್ರದೇಶದಲ್ಲಿ ತಾತನೇ ಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿರುವ ಹೀನಕೃತ್ಯ ನಡೆದಿದೆ.

ಟ್ರೆಂಡಿಂಗ್​ ಸುದ್ದಿ

ಹೆತ್ತ ತಾಯಿ ಕೆಲಸಕ್ಕೆ ಹೋಗಿದ್ದಗ ತಾತ ತನ್ನ 6 ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ. ಅಜ್ಜ ಈ ಕೃತ್ಯ ಗೊತ್ತಾಗುತ್ತಿದ್ದಂತೆ ಅಜ್ಜ ಮೊಮ್ಮಗಳ ಪೋಷಕರಿಗೆ ಮನೆಯನ್ನು ನಿಮ್ಮ ಹೆಸರಿಗೆ ಮನೆ ಬರೆದುಕೊಡುತ್ತೇನೆ. ಪೊಲೀಸರಿಗೆ ದೂರು ನೀಡಬೇಡಿ ಎಂದು ಪುಸಲಾಯಿಸಿದ್ದಾನೆ. ಪೋಷಕರು ಮನೆಯಿಂದ ಆಚೆ ಬರದಂತೆ ತಡೆದಿದ್ದಾನೆ. ಮಗುವಿನ ತಾಯಿ ಕೆಲಸಕ್ಕೆ ಹೋಗುವ ನೆಪದಲ್ಲಿ ಮನೆಯಿಂದಾಚೆಗೆ ಬಂದು ನೆರೆಹೊರೆಯವರ ನೆರವು ಪಡೆದು ಆಸ್ಪತ್ರೆಗೆ ಸೇರಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಹುಳಿಮಾವು ಪೊಲೀಸರು ಪೋಕ್ಸೋ ಕಾಯಿದೆಯಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮೂಲತಃ ತಮಿಳುನಾಡು ಮೂಲದ ಈ ಕುಟುಂಬ ಹುಳಿಮಾವು ಪ್ರದೇಶದಲ್ಲಿ ನೆಲೆಸಿತ್ತು. ವಿಷಯ ಗೊತ್ತಿದ್ದರೂ ಏನೂ ತಿಳಿಯದಂತೆ ಇದ್ದ ಬಾಲಕಿಯ ತಂದೆಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಬಾಲಕಿಯ ತಾತ, ಅಜ್ಜಿ, ಚಿಕ್ಕಪ್ಪ ಮೊದಲಾದವರು ಪರಾರಿಯಾಗಿದ್ದಾರೆ. ಇವರು ತಲೆಮರೆಸಿಕೊಳ್ಳಲು ಬಾಲಕಿಯ ತಂದೆಯೇ ಸಹಾಯ ಮಾಡಿರುವ ಗುಮಾನಿ ಇದೆ ಎಂದು ಪೊಲೀಸರು ಹೇಳಿದ್ದಾರೆ.

33 ಲಕ್ಷ ರೂ.ಮೌಲ್ಯದ ಗಾಂಜಾ ವಶ; ರೈಲ್ವೇ ನೌಕರನೇ ಕಳ್ಳಸಾಗಾಣೆದಾರ

ರೈಲ್ವೇ ಇಲಾಖೆಯಲ್ಲಿ ಗುತ್ತಿಗೆ ಆಧಾರದದಲ್ಲಿ ಕೆಲಸ ಮಾಡುತ್ತಿದ್ದ ನೌಕರನೊಬ್ಬ ಸುಮಾರು 33 ಲಕ್ಷ ರೂಪಾಯಿ ಮೌಲ್ಯದ ಗಾಂಜಾವನ್ನು ಕಳ್ಳಸಾಗಾಣೆ ಮಾಡಲು ಪ್ರಯತ್ನಿಸಿ ಪೊಲೀಸರ ಅತಿಥಿಯಾಗಿದ್ದಾನೆ. ಈಶಾನ್ಯ ರಾಜ್ಯದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ರೈಲಿನಲ್ಲಿ ಈತ ಈ ಗಾಂಜಾವನ್ನು ಕಳ್ಳಸಾಗಾಣೆ ಮಾಡಲು ಪ್ರಯತ್ನ ನಡೆಸಿದ್ದಾನೆ.

ದಿಪಿನ್‌ ದಾಸ್‌ ಎಂಬಾತನೇ ಈ ಗುತ್ತಿಗೆ ನೌಕರ. 20 ವರ್ಷದ ಈತ ಕೇವಲ 7 ತಿಂಗಳ ಹಿಂದೆಯಷ್ಟೇ ರೈಲ್ವೇ ಇಲಾಖೆಯಲ್ಲಿ ಬೆಡ್‌ ರೋಲರ್‌ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ. ಈತ ಅಗರ್ತಲ- ಎಸ್‌ ಎಂವಿಟಿ ಬೆಂಗಳೂರು ಎಕ್ಸ್‌ ಪ್ರೆಸ್‌ ರೈಲಿನಲ್ಲಿ ಎರಡು ಪೆಟ್ಟಿಗೆಗಳಲ್ಲಿ 32.8 ಕೆಜಿ ಗಾಂಜಾವನ್ನು ಕಳ್ಳ ಸಾಗಾಣೆ ಮಾಡಲು ವಿಫಲ ಯತ್ನ ನಡೆಸಿದ್ದ.

ಇದನ್ನೂ ಓದಿ| Kalki Day 1 Collection: ಬಾಕ್ಸ್‌ ಆಫೀಸ್‌ನಲ್ಲಿ ಬಂಗಾರದ ಬೆಳೆ ತೆಗೆದ ಕಲ್ಕಿ 2898 ಎಡಿ; ಬಾಹುಬಲಿ, ಆರ್‌ಆರ್‌ಆರ್‌ ದಾಖಲೆ ಸರಿಗಟ್ಟಿತೇ? ಕಲ್ಕಿ ಸುದ್ದಿಗಳನ್ನು ಇಲ್ಲಿ ಓದಿ

ಈತ ಕಳ್ಳ ಸಾಗಾಣೆ ಮಾಡುತ್ತಿರುವ ಖಚಿತ ಸುಳಿವು ದೊರೆಯುತ್ತಿದ್ದಂತೆ ಸರ್ಕಾರಿ ರೈಲ್ವೇ ಪೊಲೀಸರು ರೈಲು ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ದಿಪಿನ್‌ ನನ್ನು ಬಂಧಿಸಿದ್ದಾರೆ. ಈತ ಅಗರ್ತಲಾದಲ್ಲಿ ಇಮ್ರಾನ್‌ ಎಂಬಾತನಿಂದ ಈ ಗಾಂಜಾ ಪೆಟ್ಟಿಗೆಗಳನ್ನು ಸಂಗ್ರಹಿಸಿಕೊಂಡು ಬಂದಿದ್ದು, ಬೆಂಗಳೂರಿನಲ್ಲಿ ಬಿಸ್ವಜಿತ್‌ ಎಂಬಾತನಿಗೆ ತಲುಪಿಸಬೇಕಿತ್ತು. ಇದೀಗ ಬಿಸ್ವಜಿತ್‌ ಮತ್ತು ಇಮ್ರಾನ್‌ ಇಬ್ಬರೂ ತಲೆ ಮರೆಸಿಕೊಂಡಿದ್ದಾರೆ.

ಪೊಲೀಸರು ಈತನ ವಿರುದ್ಧ ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯಿದೆ (ಎನ್‌ ಡಿಪಿಎಸ್)‌ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 2023ರಲ್ಲಿ ಸರ್ಕಾರಿ ರೈಲ್ವೇ ಪೊಲೀಸರು 5.6 ಕೋಟಿ ರೂಪಾಯಿ ಮೌಲ್ಯದ 303 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದು ಈವರೆಗಿನ ದಾಖಲೆಯಾಗಿದೆ

(ವರದಿ- ಎಚ್. ಮಾರುತಿ, ಬೆಂಗಳೂರು)

ಟಿ20 ವರ್ಲ್ಡ್‌ಕಪ್ 2024