ಕನ್ನಡ ಸುದ್ದಿ  /  ಜೀವನಶೈಲಿ  /  ಐಆರ್‌ಸಿಟಿಸಿ ಟೂರ್ ಪ್ಯಾಕೇಜ್: ಬೆಂಗಳೂರಿನಿಂದ ಕನ್ಯಾಕುಮಾರಿ, ರಾಮೇಶ್ವರಂ, ಮಧುರೈ ಪ್ರವಾಸ; ದಿನಾಂಕ, ಟಿಕೆಟ್ ದರ ಮಾಹಿತಿ ತಿಳಿಯಿರಿ

ಐಆರ್‌ಸಿಟಿಸಿ ಟೂರ್ ಪ್ಯಾಕೇಜ್: ಬೆಂಗಳೂರಿನಿಂದ ಕನ್ಯಾಕುಮಾರಿ, ರಾಮೇಶ್ವರಂ, ಮಧುರೈ ಪ್ರವಾಸ; ದಿನಾಂಕ, ಟಿಕೆಟ್ ದರ ಮಾಹಿತಿ ತಿಳಿಯಿರಿ

ಐಆರ್‌ಸಿಟಿಸಿ ಪ್ರತಿ ಗುರುವಾರ ಬೆಂಗಳೂರಿನಿಂದ ಕನ್ಯಾಕುಮಾರಿ-ರಾಮೇಶ್ವರಂ-ಮಧುರೈ ಟೂರ್ ಪ್ಯಾಕೇಜ್ ಆಯೋಜಿಸುತ್ತದೆ. ಈ ಪ್ಯಾಕೇಜ್ ಹೇಗಿರುತ್ತೆ, ನೋಡಬಹುದಾದ ತಾಣಗಳು, ಹೋಟೆಲ್ ವ್ಯವಸ್ಥೆ, ಊಟ, ಪ್ಯಾಕೇಜ್ ದರಗಳ ವಿವರನ್ನು ತಿಳಿಯಿರಿ.

ಐಆರ್‌ಸಿಟಿಸಿ ಟೂರ್ ಪ್ಯಾಕೇಜ್: ಬೆಂಗಳೂರಿನಿಂದ ಕನ್ಯಾಕುಮಾರಿ, ರಾಮೇಶ್ವರಂ, ಮಧುರೈ ಪ್ರವಾಸ; ದಿನಾಂಕ, ಟಿಕೆಟ್ ದರ ಮಾಹಿತಿ ತಿಳಿಯಿರಿ
ಐಆರ್‌ಸಿಟಿಸಿ ಟೂರ್ ಪ್ಯಾಕೇಜ್: ಬೆಂಗಳೂರಿನಿಂದ ಕನ್ಯಾಕುಮಾರಿ, ರಾಮೇಶ್ವರಂ, ಮಧುರೈ ಪ್ರವಾಸ; ದಿನಾಂಕ, ಟಿಕೆಟ್ ದರ ಮಾಹಿತಿ ತಿಳಿಯಿರಿ

ಬಂಗಾಳ ಕೊಲ್ಲಿ, ಅರೇಬಿಯನ್ ಸಮುದ್ರ ಹಾಗೂ ಹಿಂದೂ ಮಹಾಸಾಗರ ಮೂರು ಸಾಗರಗಳ ಸಂಗಮ ಸ್ಥಳವಾಗಿರುವ ಕನ್ಯಾಕುಮಾರಿ ಭಾರತದ ಪರ್ಯಾಯ ದಕ್ಷಿಣ ಭಾಗದ ದ್ವೀಪವಾಗಿದೆ. ದಕ್ಷಿಣ ತುದಿಯಲ್ಲಿರುವ ಕನ್ಯಾಕುಮಾರಿಯಲ್ಲಿ ವಿವೇಕಾನಂದ ಶಿಲಾ ಸ್ಮಾರಕ ಪ್ರವಾಸಿಗರ ಆಕರ್ಷಣೆಯಾಗಿದೆ. ಸ್ವಾಮಿ ವಿವೇಕಾನಂದರ ಗೌರವಾರ್ಥವಾಗಿ 1970 ರಲ್ಲಿ ವಿವೇಕಾನಂದ ರಾಕ್ ಅನ್ನು ನಿರ್ಮಿಸಲಾಗಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಯಾರೇ ದಕ್ಷಿಣ ಭಾರತ ಪ್ರವಾಸ ಕೈಗೊಂಡರು ಅವರ ಪಟ್ಟಿಯಲ್ಲಿ ಕನ್ಯಾಕುಮಾರಿ ಇಲ್ಲದಿದ್ದರೂ ಪ್ರವಾಸ ಪೂರ್ಣವಾಗುವುದಿಲ್ಲ.

ಟ್ರೆಂಡಿಂಗ್​ ಸುದ್ದಿ

ಇದರ ಜೊತೆಗೆ ರಾಮೇಶ್ವರಂ, ಮಧುರೈ ಮೀನಾಕ್ಷಿ ದೇವಾಲಯವನ್ನು ತಪ್ಪಿಸಿಕೊಳ್ಳುವಂತಿಲ್ಲ. ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಮತ್ತು ಟೂರ್ ಕಾರ್ಪೊರೇಷನ್ - ಐಆರ್‌ಸಿಟಿಸಿ ಪ್ರತಿ ಗುರುವಾರ ಬೆಂಗಳೂರಿನಿಂದ ಕನ್ಯಾಕುಮಾರಿ-ರಾಮೇಶ್ವರಂ-ಮಧುರೈ ಟೂರ್ ಪ್ಯಾಕೇಜ್ ಆಯೋಜಿಸುತ್ತದೆ. ಈ ಪ್ಯಾಕೇಜ್ ಹೇಗಿರುತ್ತೆ, ನೋಡಬಹುದಾದ ತಾಣಗಳು, ಹೋಟೆಲ್ ವ್ಯವಸ್ಥೆ, ಊಟ, ಪ್ಯಾಕೇಜ್ ದರಗಳ ವಿವರನ್ನು ತಿಳಿಯಿರಿ.

ಬೆಂಗಳೂರು-ಕನ್ಯಾಕುಮಾರಿ-ರಾಮೇಶ್ವರಂ-ಮಧುರೈ ಟೂರ್ ಪ್ಯಾಕೇಜ್ ವಿವರ

ಪ್ಯಾಕೇಜ್ ಹೆಸರು: ಡಿವೈನ್ ತಮಿಳುನಾಡು ಪ್ಯಾಕೇಜ್ ಎಕ್ಸ್ ಬೆಂಗಳೂರು

ಪ್ರವಾಸದ ಸ್ಥಳಗಳು: ಬೆಂಗಳೂರಿನಿಂದ ಕನ್ಯಾಕುಮಾರಿ-ರಾಮೇಶ್ವರಂ-ಮಧುರೈ

ಪ್ರಯಾಣದ ಮೋಡ್: ರೈಲು

ಹೊರಡುವ ಸ್ಥಳ, ಸಮಯ: ಬೆಂಗಳೂರು ನಗರ ಪ್ರತಿ ಗುರುವಾರ ಸಂಜೆ 5 ಗಂಟೆ

ವರ್ಗ: SL/3AC

ಪ್ರವಾಸ ಯಾವಾಗ: ಪ್ರತಿ ಗುರುವಾರ

ಊಟದ ಯೋಜನೆ: ಸಿಪಿ

ಹೋಟೆಲ್ ವಿವರ: 1.ಕನ್ಯಾಕುಮಾರಿ - ಹೋಟೆಲ್ ಸಿಂಗ್ ಅಥವಾ ಗೋಪಿನಿವಾಸ್ ಗ್ರ್ಯಾಂಡ್ ಅಥವಾ ಇದೇ ರೀತಿಯ ಹೋಟೆಲ್ಸ 2.ರಾಮೇಶ್ವರಂ - ವಿನಾಗಯ ಇನ್, ರಾಮೇಶ್ವರಂ ಗ್ರ್ಯಾಂಡ್ ಅಥವಾ ಇದೇ ರೀತಿಯ ಹೋಟೆಲ್

ಬೆಂಗಳೂರು-ಕನ್ಯಾಕುಮಾರಿ-ರಾಮೇಶ್ವರಂ-ಮಧುರೈ ಟೂರ್ ಪ್ಯಾಕೇಜ್‌ನಲ್ಲಿ ಪ್ರತಿ ವ್ಯಕ್ತಿ ಪಾವತಿಸಬೇಕಾದ ಮೊತ್ತ

ಕಂಫರ್ಟ್ (3ಎಸಿ): ಒಬ್ಬರಿಗೆ 26,370 ರೂಪಾಯಿ, ಇಬ್ಬರಿಗೆ ತಲಾ 14,730 ರೂಪಾಯಿ, ಮೂವರಿಗೆ ತಲಾ 15,550 ರೂಪಾಯಿ, ಹಾಸಿಗೆ ಇರುವ ಮಗು (5-11 ವರ್ಷ) 8,880 ರೂಪಾಯಿ, ಹಾಸಿಗೆ ಇಲ್ಲದ ಮಗು (5-11 ವರ್ಷ) 7,270 ರೂಪಾಯಿ.

ಪ್ರಮಾಣಿತ (ಎಸ್‌ಎಲ್): ಒಬ್ಬರಿಗೆ 24,860 ರೂಪಾಯಿ, ಇಬ್ಬರಿಗೆ ತಲಾ 13,220 ರೂಪಾಯಿ, ಮೂವರಿಗೆ ತಲಾ 10,050 ರೂಪಾಯಿ, ಹಾಸಿಗೆ ಇರುವ ಮಗು (5-11 ವರ್ಷ) 7,370 ರೂಪಾಯಿ, ಹಾಸಿಗೆ ಇಲ್ಲದ ಮಗು (5-11 ವರ್ಷ) 5,760 ರೂಪಾಯಿ.

ಕನ್ಯಾಕುಮಾರಿ, ರಾಮೇಶ್ವರಂ, ಮಧುರೈನಲ್ಲಿ ನೋಡಬಹುದಾದ ತಾಣಗಳು, ಉಳಿದುಕೊಳ್ಳುವ ಹೋಟೆಲ್, ಊಟ ಹಾಗೂ ಇತರೆ ಮಾಹಿತಿಗಾಗಿ ಐಆರ್‌ಸಿಟಿಸಿಯ ಅಧಿಕೃತ ಜಾಲತಾಣ irctc.com ಗೆ ಭೇಟಿ ನೀಡಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)