ABANDONEDMatch 23 Florida
SL
NEP
Match Abandoned without toss
ABANDONEDMatch 30 Florida
USA
IRE
Match Abandoned without toss
ABANDONEDMatch 33 Florida
IND
CAN
Match Abandoned without toss
UPCOMINGFinalBarbados
SASA
INDIND
29 Jun 202408:00 PM
Match begins at 20:00 IST (14:30 GMT)
ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವರ್ಲ್ಡ್‌ಕಪ್

ಟಿ20 ವರ್ಲ್ಡ್‌ಕಪ್ 2024 ಓವರ್‌ವ್ಯೂ

T20 ವಿಶ್ವಕಪ್ 2024 ಜೂನ್ 1 ರಿಂದ ಜೂನ್ 29 ರವರೆಗೆ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಜೂನ್ 2 ರಂದು ಬೆಳಿಗ್ಗೆ 6 ಗಂಟೆಗೆ ಈ ಆವೃತ್ತಿಯ ಮೊದಲ ಪಂದ್ಯ ಆರಂಭವಾಗಲಿದೆ. ಈ ಬಾರಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿಯಾಗಿ ವಿಶ್ವಕಪ್ ಆಯೋಜಿಸುತ್ತಿವೆ. ಕಾಲಮಾನದಲ್ಲಿ ವ್ಯತ್ಯಾಸ ಇರುವ ಕಾರಣ ಹೆಚ್ಚಿನ ಪಂದ್ಯಗಳು ಬೆಳಿಗ್ಗೆ 6 ಅಥವಾ ರಾತ್ರಿ 8 ಗಂಟೆಗೆ ಪ್ರಾರಂಭವಾಗುತ್ತವೆ.

T20 ವಿಶ್ವಕಪ್ 2024 ಗುಂಪುಗಳು



2024ರ ಟಿ20 ವಿಶ್ವಕಪ್‌ನಲ್ಲಿ ಒಟ್ಟು 20 ತಂಡಗಳು ಭಾಗವಹಿಸುತ್ತಿವೆ. ಇವುಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ ಐದು ತಂಡಗಳಿವೆ.

ಎ ಗುಂಪು: ಭಾರತ, ಪಾಕಿಸ್ತಾನ, ಕೆನಡಾ, ಐರ್ಲೆಂಡ್, USA

ಬಿ ಗುಂಪು: ಇಂಗ್ಲೆಂಡ್, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್ಲೆಂಡ್, ಓಮನ್

ಸಿ ಗುಂಪು: ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ, ಪಪುವಾ ನ್ಯೂ ಗಿನಿಯಾ, ಉಗಾಂಡಾ,

ಡಿ ಗುಂಪು: ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ನೆದರ್ಲೆಂಡ್ಸ್ ನೇಪಾಳ

ಪ್ರತಿ ಗುಂಪಿನಲ್ಲಿರುವ ಪ್ರತಿಯೊಂದು ತಂಡವು ಎಲ್ಲ ಇತರ ತಂಡಗಳ ವಿರುದ್ಧ ಒಂದು ಪಂದ್ಯವನ್ನು ಆಡುತ್ತದೆ. ಅಂದರೆ ಎಲ್ಲಾ ಪಂದ್ಯಗಳನ್ನು ಗೆಲ್ಲುವ ತಂಡಕ್ಕೆ ಗರಿಷ್ಠ 8 ಅಂಕಗಳನ್ನು ನೀಡಲಾಗುತ್ತದೆ. ಪ್ರತಿ ಗುಂಪಿನಿಂದ ಎರಡು ತಂಡಗಳು ಸೂಪರ್ 8 ಹಂತಕ್ಕೆ ಹೋಗುತ್ತವೆ. ಸೂಪರ್ 8 ರಲ್ಲಿ ಎರಡು ಗುಂಪುಗಳು ಸ್ಪರ್ಧಿಸಲಿವೆ. ಪ್ರತಿ ಗುಂಪಿನಿಂದ ಎರಡು ತಂಡಗಳು ಸೆಮಿಫೈನಲ್‌ಗೆ ಹೋಗುತ್ತವೆ.

T20 ವಿಶ್ವಕಪ್ 2024 ಕ್ರಿಕೆಟ್ ಪಂದ್ಯಗಳನ್ನು ಎಲ್ಲಿ ಆಡಲಾಗುತ್ತದೆ?



T20 ವಿಶ್ವಕಪ್ 2024 ಕ್ರಿಕೆಟ್ ಪಂದ್ಯಗಳು ವೆಸ್ಟ್ ಇಂಡೀಸ್ ಮತ್ತು ಅಮೆರಿಕದ 9 ಕ್ರೀಡಾಂಗಣಗಳಲ್ಲಿ ನಡೆಯಲಿದೆ. ಈ ಪೈಕಿ ಆರು ವೆಸ್ಟ್ ಇಂಡೀಸ್ ಮತ್ತು ಮೂರು ಅಮೆರಿಕದಲ್ಲಿವೆ. ವೆಸ್ಟ್ ಇಂಡೀಸ್‌ನಲ್ಲಿ, ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ, ಕೆನ್ಸಿಂಗ್ಟನ್ ಓವಲ್, ಪ್ರಾವಿಡೆನ್ಸ್ ಸ್ಟೇಡಿಯಂ, ಡ್ಯಾರೆನ್ ಸಾಮಿ ಕ್ರಿಕೆಟ್ ಗ್ರೌಂಡ್, ಅರ್ನೋಸ್ ವೇಲ್ ಸ್ಟೇಡಿಯಂ ಮತ್ತು ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ ಸ್ಟೇಡಿಯಂಗಳಲ್ಲಿ ಪಂದ್ಯಗಳು ನಡೆಯಲಿವೆ. ಅಮೆರಿಕದಲ್ಲಿ ಸೆಂಟ್ರಲ್ ಬ್ರೋವರ್ಡ್ ಪಾರ್ಕ್, ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಮತ್ತು ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಲಿವೆ. ಅಂತಿಮ ಪಂದ್ಯ ಜೂನ್ 29 ರಂದು ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ವೇಳಾಪಟ್ಟಿ



ಈ ಮೆಗಾ ಟೂರ್ನಿಯಲ್ಲಿ ಎ ಗುಂಪಿನ ಭಾಗವಾಗಿ ಲೀಗ್ ಹಂತದಲ್ಲಿ ಟೀಂ ಇಂಡಿಯಾ ಆಡಲಿರುವ ಪಂದ್ಯಗಳ ವಿವರ ಮತ್ತು ಭಾರತೀಯ ಕಾಲಮಾನದ ಪ್ರಕಾರ ಪಂದ್ಯಗಳ ಸಮಯವನ್ನು ಇಲ್ಲಿ ನೋಡಬಹುದು.

ಭಾರತ vs ಐರ್ಲೆಂಡ್ - ಜೂನ್ 5 ರಂದು ರಾತ್ರಿ 8 ಗಂಟೆಗೆ (ನ್ಯೂಯಾರ್ಕ್)

ಭಾರತ vs ಪಾಕಿಸ್ತಾನ - ಜೂನ್ 9 ರಾತ್ರಿ 8 ಗಂಟೆಗೆ (ನ್ಯೂಯಾರ್ಕ್)

ಭಾರತ vs USA - ಜೂನ್ 12 ರಾತ್ರಿ 8 ಗಂಟೆಗೆ (ನ್ಯೂಯಾರ್ಕ್)

ಭಾರತ vs ಕೆನಡಾ - ಜೂನ್ 15 ರಾತ್ರಿ 8 ಗಂಟೆಗೆ (ಲ್ಯಾಂಡರ್‌ಹಿಲ್)

ಟಿ20 ವಿಶ್ವಕಪ್ ಸುದ್ದಿ

ಟಿ20 ವರ್ಲ್ಡ್‌ಕಪ್ 2024 ಪಾಯಿಂಟ್ಸ್‌ ಟೇಬಲ್

PosTeamMatchesWonLostTiedNRPointsNRRSeries Form
1INDIAIndia330006+2.017
WWW
2AFGHANISTANAfghanistan321004-0.305
WWL
3AUSTRALIAAustralia312002-0.331
LLW

ಟಿ20 ವರ್ಲ್ಡ್‌ಕಪ್ ಲೀಡರ್‌ಬೋರ್ಡ್

  • ಪ್ಲೇಯರ್ಸ್
  • ತಂಡಗಳು

Most Runs

Rahmanullah Gurbaz
Afghanistan
281ರನ್‌ಗಳು

‌Most Wickets

Fazalhaq Farooqi
Afghanistan
17ವಿಕೆಟ್‌ಗಳು

ಟಿ20 ವಿಶ್ವಕಪ್ FAQs

ಪ್ರ: 2024 ರ T20 ವಿಶ್ವಕಪ್‌ನಲ್ಲಿ ಎಷ್ಟು ತಂಡಗಳು ಆಡುತ್ತಿವೆ?

ಉ: T20 ವಿಶ್ವಕಪ್ 2024 ರಲ್ಲಿ ಒಟ್ಟು 20 ತಂಡಗಳು ಸ್ಪರ್ಧಿಸುತ್ತಿವೆ.

ಪ್ರ: T20 ವಿಶ್ವಕಪ್ 2024 ರಲ್ಲಿ ಎಷ್ಟು ಪಂದ್ಯಗಳನ್ನು ಆಡಲಾಗುತ್ತದೆ?

ಉ: T20 ವಿಶ್ವಕಪ್ 2024 ರ ಭಾಗವಾಗಿ ಒಟ್ಟು 55 ಪಂದ್ಯಗಳನ್ನು ಆಡಲಾಗುತ್ತದೆ.

ಪ್ರ: T20 ವಿಶ್ವಕಪ್ 2024 ರ ಅಂತಿಮ ಪಂದ್ಯ ಯಾವಾಗ ನಡೆಯಲಿದೆ?

ಉ: T20 ವಿಶ್ವಕಪ್ 2024 ರ ಅಂತಿಮ ಪಂದ್ಯವು ಜೂನ್ 29 ರಂದು ನಡೆಯಲಿದೆ.

ಪ್ರ: T20 ವಿಶ್ವಕಪ್ 2024 ರಲ್ಲಿ ಭಾರತ ತಂಡದ ಮೊದಲ ಪಂದ್ಯ ಯಾವಾಗ ನಡೆಯಲಿದೆ?

ಉ: ಟೀಮ್ ಇಂಡಿಯಾ ತನ್ನ ಮೊದಲ T20 ವಿಶ್ವಕಪ್ 2024 ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ.

ಪ್ರ: T20 ವಿಶ್ವಕಪ್ 2024 ರಲ್ಲಿ ಭಾರತ vs ಪಾಕಿಸ್ತಾನ ಪಂದ್ಯ ಯಾವಾಗ ನಡೆಯಲಿದೆ?

ಉ: T20 ವಿಶ್ವಕಪ್ 2024 ರಲ್ಲಿ ಭಾರತ vs ಪಾಕಿಸ್ತಾನ ಪಂದ್ಯವು ಜೂನ್ 9 ರಂದು ನಡೆಯಲಿದೆ.