ಕನ್ನಡ ಸುದ್ದಿ  /  ಜೀವನಶೈಲಿ  /  ಮಳೆಗಾಲದಲ್ಲಿ ಈ ತರಾಕಾರಿಗಳನ್ನು ಮನೆಗೇ ತರಬೇಡಿ; ಈ ಆಹಾರಗಳಿಂದ ದೂರವಿದ್ದಷ್ಟು ಒಳ್ಳೆಯದು

ಮಳೆಗಾಲದಲ್ಲಿ ಈ ತರಾಕಾರಿಗಳನ್ನು ಮನೆಗೇ ತರಬೇಡಿ; ಈ ಆಹಾರಗಳಿಂದ ದೂರವಿದ್ದಷ್ಟು ಒಳ್ಳೆಯದು

ಮಳೆಗಾಲದಲ್ಲಿ ಕೆಲವೊಂದು ತರಕಾರಿಗಳನ್ನು ತಿನ್ನದಿರುವುದು ಆರೋಗ್ಯಕ್ಕೆ ಒಳ್ಳೆಯದು. ತರಕಾರಿಗಳ ಜೊತೆಗೆ ಮೀನು, ಮಾಂಸ ಸೇರಿದಂತೆ ಕೆಲವೊಂದು ಆಹಾರಗಳ��್ನು ತಿನ್ನದಿದ್ದರೆ ಆರೋಗ್ಯ ಸಮತೋಲನದಲ್ಲಿರುತ್ತದೆ. ಈ ಕುರಿತು ನ್ಯೂಟ್ರಿಷನ್ ಎಕ್ಸ್‌ಪರ್ಟ್ ಸಲಹೆ ನೀಡಿದ್ದಾರೆ.

ಮಳೆಗಾಲದಲ್ಲಿ ಈ ತರಾಕಾರಿಗಳನ್ನು ಮನೆಗೇ ತರಬೇಡಿ
ಮಳೆಗಾಲದಲ್ಲಿ ಈ ತರಾಕಾರಿಗಳನ್ನು ಮನೆಗೇ ತರಬೇಡಿ (Unsplash)

ಮಳೆಗಾಲ ಬಂದಿದೆ. ದಿನಕಳೆದಂತೆ ಸೂರ್ಯನನ್ನು ನೋಡುವುದೇ ಅಪರೂಪವಾಗುತ್ತಿದೆ. ಮಳೆಗಾಲ ಬರುವಾಗ ಮಳೆಯೊಂದಿಗೆ ಆರೋಗ್ಯ ಸಮಸ್ಯೆಗಳು ಹೆಜ್ಜಾಗುವ ಆತಂಕ ಜೊತೆಗೆ ಬರುತ್ತದೆ. ಈವರೆಗೆ ಭಾರಿ ಬಿಸಿಲಿಗೆ ಅಂಜಿ ದೇಹವನ್ನು ತಂಪಾಗಿಸಲು ಶ್ರಮ ವಹಿಸಿದರೆ, ಈಗ ಮಳೆಯಿಂದ ಸಾಂಕ್ರಾಮಿಕ ರೋಗಗಳಿಂದ ಎಚ್ಚರಿಕೆ ವಹಿಸಬೇಕಾಗುತ್ತದೆ. ಹೆಚ್ಚಿನ ತೇವಾಂಶದಿಂದಾಗಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಹೆಚ್ಚು ಸಂತಾನೋತ್ಪತ್ತಿ ಮಾಡುವ ಸಮಯ ಇದಾಗಿದ್ದು, ಆರೋಗ್ಯ ಕುರಿತು ಹೆಚ್ಚು ಜಾಗರೂಕರಾಗಿ ಇರಬೇಕು.

ಟ್ರೆಂಡಿಂಗ್​ ಸುದ್ದಿ

ಹಿಂದೂಸ್ತಾನ್‌ ಟೈಮ್ಸ್‌ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಲಿಲ್ ಗುಡ್ನೆಸ್‌ನ ಲೀಡ್ ನ್ಯೂಟ್ರಿಷನ್ ಎಕ್ಸ್‌ಪರ್ಟ್ ಡಾ.ಸೌಮ್ಯ ಭರಣಿ ಅವರು, ಮಳೆಗಾಲದಲ್ಲಿ ಹೇಗೆ ಆರೋಗ್ಯ ಕಾಳಜಿ ವಹಿಸಬೇಕೆಂದು ಸಲಹೆ ನೀಡಿದ್ದಾರೆ. ಮಳೆಗಾಲದಲ್ಲಿ ಗಾಳಿಯ ತೇವಾಂಶ ಹೆಚ್ಚಾಗುತ್ತದೆ. ಇದು ಸೋಂಕು ಹರಡುವಿಕೆಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.

ಮಳೆಗಾಲದಲ್ಲಿ ಸೇವಿಸಬೇಕಾದ ಕೆಲವು ತರಕಾರಿಗಳಿವೆ. ಅಂಥಾ ತರಕಾರಿಗಳೆಂದರೆ ಸೋರೆಕಾಯಿ, ಮೂಲಂಗಿ, ಸೌತೆಕಾಯಿ, ಬೆಳ್ಳುಳ್ಳಿ, ಟೊಮೆಟೊ, ಬೆಂಡೆಕಾಯಿ ಇತ್ಯಾದಿ. ಆದರೂ, ಮಳೆಯ ಆರ್ಭಟದ ನಡುವೆ ಸೋಂಕುಗಳು ಮತ್ತು ಅನಾರೋಗ್ಯಗಳಿಂದ ದೂರವಿರಲು ಮಳೆಗಾಲದಲ್ಲಿ ಕೆಲವೊಂದು ತರಕಾರಿಗಳನ್ನು ಸೇವಿಸುವುದರಿಂದ ದೂರವಿರುವುದು ಒಳ್ಳೆಯದು.

ಗುರ್‌ಗಾಂವ್‌ನ ಫೋರ್ಟಿಸ್ ಮೆಮೋರಿಯಲ್ ರಿಸರ್ಚ್ ಇನ್ಸ್ಟಿಟ್ಯೂಟ್‌ನ ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ ದೀಪ್ತಿ ಖತುಜಾ ಅವರು ಮಳೆಗಾಲದಲ್ಲಿ ಸೇವಿಸಬಾರದ ತರಕಾರಿಗಳ ಕುರಿತು ಮಾತನಾಡಿದ್ದಾರೆ.

ಹಸಿರೆಲೆ ತರಕಾರಿಗಳು

ಮಳೆಯು ಬೆಳೆಯ ಬೆಳವಣಿಗೆ ಮತ್ತು ಕೀಟಬಾಧೆ ಹೆಚ್ಚಲು ಕಾರಣವಾಗುತ್ತದೆ. ಹಸಿರು ಎಲೆ ತರಕಾರಿಗಳಿಗೆ ಬೇಗ ಕೀಟಬಾಧೆ ತಗುಲುತ್ತದೆ. ಹಸಿರು ಎಲೆ ತರಕಾರಿಗಳಲ್ಲಿ ತೇವಾಂಶ ಹೆಚ್ಚಿರುವುದರಿಂದ ಅವುಗಳು ಬೇಗನೆ ಕಲುಷಿತಗೊಳ್ಳುತ್ತವೆ. ಪಾಲಕ್, ಎಲೆಕೋಸಿನಂಥ ತರಕಾರಿಗಳನ್ನು ಆದಷ್ಟು ಕಡಿಮೆ ಬಳಸುವುದು ಒಳ್ಳೆಯದು ಅದರ ಬದಲಿಗೆ ಹಾಗಲಕಾಯಿ, ಸೋರೆಕಾಯಿ ತಿನ್ನಬಹುದು.

ಬದನೆಕಾಯಿ

ನೇರಳೆ ಬಣ್ಣದ ಬದನೆಯು ಆಲ್ಕಲಾಯ್ಡ್‌ಗಳು ಎಂದು ಕರೆಯಲ್ಪಡುವ ರಾಸಾಯನಿಕಗಳ ವರ್ಗದಿಂದ ಮಾಡಲ್ಪಟ್ಟಿದೆ. ಈ ಬೆಳೆಗಳು ಕೀಟಗಳು ಮತ್ತು ಇತರ ಕೀಟಗಳ ವಿರುದ್ಧ ರಕ್ಷಣೆಯಾಗಿ ಈ ವಿಷಕಾರಿ ಸಂಯುಕ್ತವನ್ನು ಉತ್ಪಾದಿಸುತ್ತವೆ. ಕೀಟಗಳ ಬಾಧೆ ತೀವ್ರವಾಗಿರುವ ಮಳೆಗಾಲದಲ್ಲಿ ಬದನೆ ಸೇವನೆ ಕಡಿಮೆ ಮಾಡುವುದು ಸೂಕ್ತ. ನಂಜಿನ ಅಂಶದಿಂದಾಗಿ ಬದನೆಯು ಅಲರ್ಜಿ, ಚರ್ಮ ತುರಿಕೆ ಮತ್ತು ಚರ್ಮದ ದದ್ದುಗಳಿಗೆ ಕಾರಣವಾಗಬಹುದು.

ತರಕಾರಿಗಳನ್ನು ಹೊರತುಪಡಿಸಿ ಮಳೆಗಾಲದಲ್ಲಿ ಕೆಲವೊಂದು ಆಹಾರ ಪದಾರ್ಥಗಳ ತಪ್ಪಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ಕರಿದ ಆಹಾರ

ಮಳೆಗಾಲವು ನಮ್ಮ ಜೀರ್ಣಕಾರಿ ಕಾರ್ಯವನ್ನು ನಿಧಾನಗೊಳಿಸುತ್ತದೆ. ಎಣ್ಣೆಯಲ್ಲಿ ಕರಿಯುವ ಪಕೋಡಾ, ಸಮೋಸಾ ಮತ್ತು ಕಚೋಡಿದಂಥಾ ಆಹಾರಗಳು ಎಷ್ಟೇ ರುಚಿಕರವಾಗಿ ಕಂಡರೂ; ಅವು ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್‌ನಂಥಾ ಸಮಸ್ಯೆಗಳಿಗೆ ಕಾರಣವಾಗಬಹುದು. ಇದಲ್ಲದೆ ಗೋಲ್‌ಕಪ್ಪಾಗಳಂಥಾ ಬೀದಿ ಆಹಾರಗಳನ್ನು ಕೂಡಾ ತಿನ್ನುವುದನ್ನು ತಪ್ಪಿಸಿ.

ಮಾಂಸ ಮತ್ತು ಸಮುದ್ರಾಹಾರಗಳು

ನೀರಿನಿಂದ ಹರಡುವ ರೋಗಗಳನ್ನು ತಪ್ಪಿಸಲು, ಮಳೆಗಾಲದಲ್ಲಿ ಮಾಂಸ ಮತ್ತು ಸಮುದ್ರಾಹಾರಗಳನ್ನು ಸೇವಿಸದಿರುವುದು ಉತ್ತಮ. ಮುಖ್ಯವಾಗಿ, ಸಮುದ್ರಾಹಾರಗಳು ಮಳೆಗಾಲದಲ್ಲಿ ಆರೋಗ್ಯಕರವಲ್ಲ. ಮಳೆಗಾಲದಲ್ಲಿ ಸಮುದ್ರಕ್ಕಿಳಿದು ಮೀನುಗಾರಿಗೆ ಮಾಡಲ್ಲ. ಹೀಗಾಗಿ ಸ್ಟೋರ್‌ ಮಾಡಲಾದ ಮೀನು ಅಥವಾ ಮಾಂಸವನ್ನೇ ಪೂರೈಕೆ ಮಾಡಿ ಮಾರಾಟ ಮಾಡಲಾಗುತ್ತದೆ. ಎಷ್ಟೋ ದಿನ ಹಳೆಯ ಮೀನುಗಳು ಫ್ರೆಶ್‌ ಆಗಿರುವುದಿಲ್ಲ.