ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಜುಲೈ ತಿಂಗಳ ಮಾಸ ಭವಿಷ್ಯ; ವೃಷಭ ರಾಶಿಯವರಿಗೆ ಹಣದ ಕೊರತೆ, ಕನ್ಯಾ, ಮಕರದವರಿಗೆ ಅನಾರೋಗ್ಯ, ಇನ್ನು ಯಾವ ರಾಶಿಯವರಿಗೆ ಏನಿದೆ ರಾಶಿಫಲ

ಜುಲೈ ತಿಂಗಳ ಮಾಸ ಭವಿಷ್ಯ; ವೃಷಭ ರಾಶಿಯವರಿಗೆ ಹಣದ ಕೊರತೆ, ಕನ್ಯಾ, ಮಕರದವರಿಗೆ ಅನಾರೋಗ್ಯ, ಇನ್ನು ಯಾವ ರಾಶಿಯವರಿಗೆ ಏನಿದೆ ರಾಶಿಫಲ

Monthly Horoscope 2024 July: ಇಂಗ್ಲಿಷ್ ಕ್ಯಾಲೆಂಡರ್‌ನ ಜೂನ್ ತಿಂಗಳು ಕೊನೆಯ ಭಾಗಕ್ಕೆ ಬಂದಿದೆ. ಜುಲೈ ತಿಂಗಳ ಮಾಸ ಭವಿಷ್ಯದ ಕಡೆಗೆ ಗಮನಹರಿಯತೊಡಗಿದೆ. ಜುಲೈನಲ್ಲಿ ವೃಷಭ ರಾಶಿಯವರಿಗೆ ಹಣದ ಕೊರತೆ, ಕನ್ಯಾ, ಮಕರದವರಿಗೆ ಅನಾರೋಗ್ಯದ ಸುಳಿವು ಕಂಡುಬಂದಿದೆ. ಇನ್ನು ಯಾವ ರಾಶಿಯವರಿಗೆ ಏನಿದೆ ರಾಶಿಫಲ ಎಂಬ ವಿವರ ಇಲ್ಲಿದೆ.

ಜುಲೈ ತಿಂಗಳ ಮಾಸ ಭವಿಷ್ಯ; ವೃಷಭ ರಾಶಿಯವರಿಗೆ ಹಣದ ಕೊರತೆ, ಕನ್ಯಾ, ಮಕರದವರಿಗೆ ಅನಾರೋಗ್ಯ, ಇನ್ನು ಯಾವ ರಾಶಿಯವರಿಗೆ ಏನಿದೆ ರಾಶಿಫಲ
ಜುಲೈ ತಿಂಗಳ ಮಾಸ ಭವಿಷ್ಯ; ವೃಷಭ ರಾಶಿಯವರಿಗೆ ಹಣದ ಕೊರತೆ, ಕನ್ಯಾ, ಮಕರದವರಿಗೆ ಅನಾರೋಗ್ಯ, ಇನ್ನು ಯಾವ ರಾಶಿಯವರಿಗೆ ಏನಿದೆ ರಾಶಿಫಲ

ಜುಲೈ ತಿಂಗಳ ಮಾಸ ಭವಿಷ್ಯ (Monthly Horoscope 2024 July): 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ತ್ವಶಾಸ್ತ್ರದ ಮಾರ್ಮಿಕ ನುಡಿ. ಇದು ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಹಲವರು ಪ್ರತಿ ತಿಂಗಳ ಆರಂಭದಲ್ಲಿ 'ಮಾಸ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Monthly Horoscope Of July 2024).

ಜುಲೈ ತಿಂಗಳ ರಾಶಿಫಲ; 12 ರಾಶಿಗಳವರಿಗೆ ಏನು ಫಲ

ಮೇಷ ರಾಶಿ

ಆರಂಭದ ದಿನಗಳಲ್ಲಿ ದಾಂಪತ್ಯದಲ್ಲಿ ಮನಸ್ತಾಪ ಉಂಟಾಗಬಹುದು. ಹಣಕಾಸಿನ ವಿಚಾರದಲ್ಲಿ ತೊಂದರೆ ಬಾರದಿದ್ದರೂ ಮಾನಸಿಕ ಒತ್ತಡವಿರುತ್ತದೆ. ಸ್ವಂತ ಭೂಲಾಭದ ಸೂಚನೆ ಇದೆ. ಆದರೆ ಎಚ್ಚರಿಕೆ ಇರಲಿ. ವಿದ್ಯಾರ್ಥಿಗಳು ಆತಂಕ ಬಿಟ್ಟು ವ್ಯಾಸಂಗದಲ್ಲಿ ನಿರತರಾ��ಲ್ಲಿ ವಿಶೇಷ ಲಾಭವಿದೆ. ನಿರುದ್ಯೋಗಿಗಳು ವಿದೇಶದಲ್ಲಿ ಉತ್ತಮ ಅವಕಾಶ ಪಡೆಯುತ್ತಾರೆ. ದಿನನಿತ್ಯದ ಬಳಕೆಗೆ ಬೇಕಾಗುವ ಪದಾರ್ಥಗಳ ವ್ಯಾಪಾರದಲ್ಲಿ ವಿಶೇಷ ಲಾಭಗಳಿಸುವಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯ ಅವಶ್ಯಕತೆ ಇದೆ. ಆತ್ಮೀಯರ ಸಹಾಯ ಸಹಕಾರ ದೊರೆಯುತ್ತದೆ

ವೃಷಭ ರಾಶಿ

ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ತೆಗೆದುಕೊಳ್ಳುವ ತಪ್ಪು ನಿರ್ಧಾರಗಳಿಂದ ಹಣದ ಕೊರತೆಯನ್ನು ಎದುರಿಸುವಿರಿ. ಮಾನಸಿಕ ವ್ಯಾಕುಲತೆಯಿಂದ ಹೊರ ಬಂದಲ್ಲಿ ಯಾವುದೇ ವಿಚಾರವೂ ಕಷ್ಟಕರವಲ್ಲ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ದೊಡ್ಡ ಸಾಧನೆಯನ್ನು ಮಾಡಲಿದ್ದಾರೆ. ಅವಿವಾಹಿತರಿಗೆ ಪರಿಚಯ ಅಥವಾ ಸಂಬಂಧದಲ್ಲಿ ವಿವಾಹ ಆಗುವ ಸಾಧ್ಯತೆಗಳಿವೆ. ಉದ್ಯೋಗದಲ್ಲಿ ಹಠದ ಸ್ವಭಾವವನ್ನು ಬಿಡಬೇಕು. ಹೊಸ ವ್ಯಾಪಾರವನ್ನು ಆರಂಭಿಸಲು ಇದು ಸಕಾಲವಲ್ಲ. ಅನಿರೀಕ್ಷಿತ ಧನ ಲಾಭವಿರುತ್ತದೆ. ಕಿರು ಪ್ರವಾಸ ಕೈಗೊಳ್ಳುವಿರಿ

ಮಿಥುನ ರಾಶಿ

ಕಮಿಷನ್ ಆಧಾರಿತ ವ್ಯಾಪಾರ ವ್ಯವಹಾರದಲ್ಲಿ ಲಾಭವಿರುತ್ತದೆ. ಭೂಮಿಯ ವಿಚಾರದಲ್ಲಿ ಕಾನೂನಿನ ತೊಡಕೊಂದು ಎದುರಾಗಬಹುದು. ಆದಾಯದಲ್ಲಿ ಕೊರತೆ ಇರದು. ಅನಾವಶ್ಯಕ ಖರ್ಚು ವೆಚ್ಚಗಳನ್ನು ಕಡಿಮೆ ಮಾಡಿರಿ. ಹೈನುಗಾರಿಕೆ ವ್ಯಾಪಾರದಲ್ಲಿ ಲಾಭವಿದೆ. ವೈದ್ಯಕೀಯ ಕ್ಷೇತ್ರಕ್ಕೆ ಬೇಕಾದ ಪೂರಕ ವ್ಯವಸ್ಥೆಯನ್ನು ನೀಡುವ ವ್ಯಾಪಾರದಲ್ಲಿ ಲಾಭವಿದೆ. ಹಣಕಾಸಿನ ಉದ್ಯಮದಲ್ಲಿ ಕೊಂಚ ಹಿನ್ನಡೆ ಲಭಿಸಬಹುದು. ಉದ್ಯೋಗದಲ್ಲಿ ಬಡ್ತಿ ದೊರೆಯುತ್ತದೆ. ಅಂತರರಾಷ್ಟ್ರೀಯ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ಮೇಲಧಿಕಾರಿಗಳಿಂದ ಉತ್ತಮ ಪ್ರಶಂಸೆ ದೊರೆಯುತ್ತದೆ

ಕಟಕ ರಾಶಿ

ಪದೇ ಪದೇ ಮನಸ್ಸನ್ನು ಬದಲಿಸಿದರೆ ಕೆಲಸ ಕಾರ್ಯದಲ್ಲಿ ಪರಿಪೂರ್ಣತೆ ದೊರಕದು. ಅವಶ್ಯಕತೆಗೆ ಬೇಕಾದಷ್ಟು ಹಣ ಕೈ ಸೇರುತ್ತದೆ. ಯಾವುದೇ ವಿಚಾರದಲ್ಲಿಯೂ ಅತಿಯಾದ ಆಸೆ ಬೇಡ. ನಿಮ್ಮ ಮನಸ್ಸನ್ನು ಅರಿತ ಕುಟುಂಬದವರು ಎಲ್ಲಾ ಸೌಕರ್ಯವನ್ನು ನೀಡುತ್ತಾರೆ. ಕುಟುಂಬದ ಸದಸ್ಯರು ನಿಮ್ಮ ಬೆಂಬಲಕ್ಕೆ ಸದಾ ಬರುತ್ತಾರೆ. ರಾಜಕಾರಣಿಗಳಿಗೆ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಅಧಿಕಾರಿಗಳು ತಪ್ಪು ನಿರ್ಧಾರದಿಂದ ಆತಂಕದ ಕ್ಷಣವನ್ನು ಎದುರಿಸಬಹುದು. ಯೋಚಿಸದೇ ಯಾವುದೇ ಕೆಲಸವನ್ನು ಮಾಡದಿರಿ.

ಸಿಂಹ ರಾಶಿ

ನಿಮ್ಮಲ್ಲಿರುವ ಆತ್ಮವಿಶ್ವಾಸ ಉದ್ಯೋಗದಲ್ಲಿನ ದೊಡ್ಡ ಸಮಸ್ಯೆಗೆ ಪರಿಹಾರ ನೀಡುತ್ತದೆ. ಸುಲಭವಾಗಿ ಯಾವುದೇ ಸವಲತ್ತು ದೊರಕದು ಆದರೆ ಕೊಂಚ ಹೆಚ್ಚಿನ ಪ್ರಯತ್ನದಿಂದ ಯಾವುದು ಅಸಾಧ್ಯವಾಗದು. ಸ್ತ್ರೀಯರು ಅನಿರೀಕ್ಷಿತವಾಗಿ ಉದ್ಯೋಗವನ್ನು ಬದಲಾಯಿಸಬೇಕಾಗುತ್ತದೆ. ಗಹಿಣಿಯರಿಗೆ ತವರು ಮನೆಯಿಂದ ಉಡುಗೊರೆಯೊಂದು ದೊರೆಯಲಿದೆ. ವೃತ್ತಿ ನಿರತರಿಗೆ ತಂಗುವ ವ್ಯವಸ್ಠೆ ಕಲ್ಪಿಸುವವರಿಗೆ ಉತ್ತಮ ಆದಾಯ ದೊರೆಯುತ್ತದೆ. ನಿಮ್ಮದಲ್ಲದ ತಪ್ಪನ್ನು ಒಪ್ಪಬೇಕಾದೀತು ಎಚ್ಚರಿಕೆ ಇರಲಿ. ಆರೋಗ್ಯದ ಕಡೆ ಗಮನವಿರಲಿ

ಕನ್ಯಾ ರಾಶಿ

ಕಾನೂನು ಪಾಲಕರು ದೊಡ್ಡ ಸಮಸ್ಯೆಗೆ ಒಳಗಾಗುತ್ತಾರೆ. ಸಿದ್ಧ ಉಡುಪನ್ನು ವಿದೇಶಕ್ಕೆ ರಫ್ತುಮಾಡುವ ಸಂಸ್ಥೆಯನ್ನು ನಡೆಸುತ್ತಿದ್ದಲ್ಲಿ ಹಣದ ತೊಂದರೆ ಬಾರದು. ಅಜೀರ್ಣದ ತೊಂದರೆ ಪದೇಪದೇ ಬಾಧಿಸುತ್ತದೆ. ಸಾಮಾನ್ಯವಾಗಿ ನಿಮ್ಮ ನಿರೀಕ್ಷೆಗೆ ವಿರುದ್ಧವಾದಂತಹ ಫಲಿತಾಂಶಗಳು ಬಂದರೂ ಯಾವುದೇ ತೊಂದರೆ ಕಾಣುವುದಿಲ್ಲ. ಸ್ಥಿರವಾದ ಮನಸ್ಸು ಬದಲಾಗದ ನಿರ್ಧಾರ ಜೀವನವನ್ನು ರೂಪಿಸುತ್ತದೆ. ಸಾರಿಗೆ ವ್ಯವಸ್ಥೆ ಕಲ್ಪಿಸುವ ಉದ್ಯೋಗದಲ್ಲಿ ಉತ್ತಮ ಆದಾಯ ದೊರೆಯುತ್ತದೆ.

ತುಲಾ ರಾಶಿ

ಬೇಕರಿ ಅಥವಾ ಹೋಟೆಲ್ ವ್ಯಾಪಾರದಲ್ಲಿ ಉತ್ತಮ ಆದಾಯವಿರುತ್ತದೆ. ಉದ್ಯೋಗಸ್ಥರು ಉತ್ತಮ ಬದಲಾವಣೆಯನ್ನು ಪಡೆಯುತ್ತಾರೆ. ವಿದ್ಯಾರ್ಥಿಗಳು ಜವಾಬ್ದಾರಿಯನ್ನು ಅರಿತು ತಮ್ಮ ಕರ್ತವ್ಯ ಪಾಲನೆ ಮಾಡುತ್ತಾರೆ. ಕುಟುಂಬದ ಹೆಚ್ಚಿನ ಜವಾಬ್ದಾರಿ ನಿಮಗಿರುತ್ತದೆ. ಸರ್ಕಾರದ ಅನುಮತಿ ಪಡೆದು ಮಾಡುವ ಜನಸೇವೆಗೆ ಪೂರಕವಾದ ವ್ಯವಹಾರಗಳಲ್ಲಿ ಲಾಭ ದೊರೆಯುತ್ತದೆ. ರಾಜಕಾರಣಿಗಳು ನಿರೀಕ್ಷಿತ ಸ್ಥಾನಮಾನ ಗಳಿಸುತ್ತಾರೆ. ಸ್ತ್ರೀಯರಿಗೆ ವಿಶೇಷವಾದ ಸೌಕರ್ಯಗಳು ಲಭಿಸುತ್ತದೆ. ಸಾಲ ಕೊಡುವುದು ತೆಗೆದುಕೊಳ್ಳುವುದು ಎರಡು ಒಳ್ಳೆಯದಲ್ಲ

ವೃಶ್ಚಿಕ ರಾಶಿ

ಹೃದಯದ ತೊಂದರೆ ಇರುವವರು ಎಚ್ಚರಿಕೆ ವಹಿಸಬೇಕು. ಕುಟುಂಬದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಲ್ಲಿ ಮಾತ್ರ ಕೈ ಹಿಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಲಭಿಸುತ್ತದೆ. ಯೋಗ, ಪ್ರಾಣಾಯಾಮ, ನಾಟ್ಯ, ನಾಟಕದ ತರಬೇತಿ ನೀಡುವ ಪಾಂಡಿತ್ಯ ಉಳ್ಳವರಿಗೆ ವಿಶೇಷ ಅವಕಾಶ ದೊರೆಯುತ್ತದೆ. ಪಾಲುಗಾರಿಕೆಯ ವ್ಯಾಪಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಅನಾವಶ್ಯಕ ಖರ್ಚು ವೆಚ್ಚಗಳನ್ನು ನಿಯಂತ್ರಿಸುವುದು ಒಳಿತು. ಔಷಧೀಯ ಮಾರಾಟಗಾರರು ಹೆಚ್ಚಿನ ಆದಾಯ ಪಡೆಯುತ್ತಾರೆ. ಪ್ರೀತಿ ವಿಶ್ವಾಸದಿಂದ ಜನರ ಮನಸ್ಸನ್ನು ಗೆಲ್ಲಿರಿ

ಧನು ರಾಶಿ

ಕ್ರೀಡಾ ಮನೋಭಾವನೆಯಿಂದ ಜೀವನದಲ್ಲಿ ಅಸಾಧ್ಯವಾದುದನ್ನು ಸಾಧಿಸಬಲ್ಲಿರಿ. ಕಡಿಮೆ ಅವಕಾಶಗಳಿದ್ದರೂ ಆತ್ಮ ವಿಶ್ವಾಸ ಮತ್ತು ಹೆಚ್ಚಿನ ಪ್ರಯತ್ನದಿಂದ ಜಯ ಲಭಿಸುತ್ತದೆ. ಶಾಲಾ ಕಾಲೇಜುಗಳನ್ನು ಆರಂಭಿಸುವ ಗುರಿ ಹೊಂದಿದ್ದಲ್ಲಿ ಸಾಧ್ಯವಾಗಬಹುದು. ಜನಸಾಮಾನ್ಯರಿಗಾಗಿ ಪ್ರಯೋಜನಕಾರಿ ಕೆಲಸಗಳನ್ನು ಮಾಡುವಿರಿ. ಉದ್ಯೋಗದಲ್ಲಿ ಉತ್ತಮ ಆದಾಯವಿದ್ದರೂ ಮನಸ್ಸಂತೋಷಕ್ಕಾಗಿ ಸಣ್ಣ ಪ್ರಮಾಣದ ಕೈಗಾರಿಕೆಯೊಂದನ್ನು ಆರಂಭಿಸುವಿರಿ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಸದಾಕಾಲ ನಿರತರಾಗಿರುತ್ತಾರೆ. ಅಜೀರ್ಣದ ತೊಂದರೆ ಸಾಮಾನ್ಯವಾಗಿರುತ್ತದೆ. ಕುಟುಂಬದ ಸದಸ್ಯರೊಂದಿಗೆ ಪ್ರವಾಸಕ್ಕೆ ತೆರಳಲು ಯೋಜನೆ ರೂಪಿಸುವಿರಿ

ಮಕರ ರಾಶಿ

ಯಾವುದಾದರೂ ಒಂದು ಕೆಲಸ ಕಾರ್ಯಗಳಲ್ಲಿ ನಿರತರಾಗುವಿರಿ. ಮನಸ್ಸು ಒಳ್ಳೆಯದಾಗಿದ್ದರು ದುಡುಕುತನದ ಮಾತುಗಳು ವಿವಾದಕ್ಕೆ ಏಡೆ ಮಾಡಿಕೊಡುತ್ತವೆ. ಕ್ರಮೇಣವಾಗಿ ಹಣಕಾಸಿನ ಪರಿಸ್ಥಿತಿಯು ಸುಧಾರಿಸುತ್ತದೆ. ಎಂತಹ ಕಷ್ಟದ ಸಂದರ್ಭ ಎಂದರಾದರೂ ಸಹ ಯಾರಿಂದಲೂ ಸಹಾಯವನ್ನು ನಿರೀಕ್ಷಿಸುವುದಿಲ್ಲ. ಉದ್ಯೋಗದಲ್ಲಿ ಬಿಡುವಿಲ್ಲದ ಕೆಲಸವಿರುತ್ತದೆ. ವ್ಯಾಪಾರ ವ್ಯವಹಾರಗಳು ಮಧ್ಯಮ ಗತಿಯಲ್ಲಿ ಸಾಗಲಿವೆ. ಶೀತವಾಯುದೋಷವೂ ಬಹುಕಾಲ ಭಾದಿಸಲಿವೆ. ತಂದೆಯವರು ಮಾಡುವ ಕೆಲಸ ಕಾರ್ಯಗಳಲ್ಲಿ ಅನಿವಾರ್ಯವಾಗಿ ಸಹಾಯ ಮಾಡುವಿರಿ.

ಕುಂಭ ರಾಶಿ

ವಾಹನ ಚಾಲನೆ ಮಾಡುವವರು ಎಚ್ಚರಿಕೆಯಿಂದ ಇರಬೇಕು. ವೃತ್ತಿನಿರತರರಿಗೆ ದೂರದೂರಿಗೆ ವರ್ಗಾವಣೆಯಾಗುತ್ತದೆ. ಹೆಚ್ಚಿನ ಪ್ರಯತ್ನದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಸೋಮಾರಿಗಳಾಗದೆ ಚುರುಕುತನದಿಂದ ವರ್ತಿಸಿದಷ್ಟುಒಳ್ಳೆಯದು. ನಿಮ್ಮ ಮನದ ವಿಚಾರವನ್ನು ಬೇರೆಯವರಿಗೆ ಹೇಳಿಕೊಂಡಲ್ಲಿ ಮಾತ್ರ ತೊಂದರೆಯಿಂದ ಮುಕ್ತರಾಗಬಹುದು. ಮಾನಸಿಕ ಒತ್ತಡ ಹೆಚ್ಚುವ ಕಾರಣ ಅನಾರೋಗ್ಯದಿಂದ ಬಳಲುವಿರಿ. ಕಬ್ಬಿಣ ಅಥವಾ ಕಟ್ಟಡಕ್ಕೆ ಬೇಕಾದ ಲೋಹಗಳ ವಸ್ತುಗಳ ವ್ಯಾಪಾರದಲ್ಲಿ ಹೇರಳ ಲಾಭ ಗಳಿಸುವಿರಿ. ಹಣ್ಣು ಮತ್ತು ತರಕಾರಿಗಳ ವ್ಯಾಪಾರದಲ್ಲಿ ಲಾಭವಿದೆ

ಮೀನ ರಾಶಿ

ಹೊಸ ಮನೆಯನ್ನು ಕೊಳ್ಳಲು ಮನಸ್ಸಿಲ್ಲದಿದ್ದರೂ ಹಣವನ್ನು ಎರವಲು ತರುವಿರಿ. ಪುಸ್ತಕ ವ್ಯಾಪಾರಿಗಳಿಗೆ ಆದಾಯದ ಕೊರತೆ ಇರುತ್ತದೆ. ಸಗಟು ವ್ಯಾಪಾರಕ್ಕಿಂತಲೂ ದಿನಸಿ ಪದಾರ್ಥಗಳ ಚಿಲ್ಲರೆ ವ್ಯಾಪಾರದಲ್ಲಿ ಹೆಚ್ಚಿನ ಆದಾಯ ದೊರೆಯುತ್ತದೆ. ಉದ್ಯೋಗದಲ್ಲಿ ಯಾವುದೇ ಬದಲಾವಣೆಗಳು ಕಂಡುಬರುವುದಿಲ್ಲ. ತಾಯಿ ಮತ್ತು ಮಕ್ಕಳಿಗೆ ಅನಾರೋಗ್ಯ ವಿರುತ್ತದೆ. ವಿದ್ಯಾರ್ಥಿಗಳು ಸಂಯಮದಿಂದ ಉನ್ನತಿಯತ್ತ ಸಾಗುತ್ತಾರೆ. ಅತಿಯಾಗಿ ಮಾತನಾಡದೆ ಸಂದರ್ಭಕ್ಕೆ ಅನುಸಾರವಾಗಿ ವರ್ತಿಸಿದರೆ ಹಣಕಾಸಿನ ತೊಂದರೆ ಬಾರದು. ಭೂ ವಿವಾದ ಒಂದು ಎದುರಾಗುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.