ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನ ಹೊರ ವರ್ತುಲ ರಸ್ತೆಯ ಇಕೋಸ್ಪೇಸ್ ಫ್ಲೈಓವರ್‌ನಲ್ಲಿ ರಸ್ತೆ ಗುಂಡಿಗಳ ಹಾವಳಿ; ವಾಹನ ಸವಾರರ ಪರದಾಟ, ವೈರಲ್‌ ವಿಡಿಯೋ

ಬೆಂಗಳೂರಿನ ಹೊರ ವರ್ತುಲ ರಸ್ತೆಯ ಇಕೋಸ್ಪೇಸ್ ಫ್ಲೈಓವರ್‌ನಲ್ಲಿ ರಸ್ತೆ ಗುಂಡಿಗಳ ಹಾವಳಿ; ವಾಹನ ಸವಾರರ ಪರದಾಟ, ವೈರಲ್‌ ವಿಡಿಯೋ

ಬೆಂಗಳೂರು ಸಂಚಾರ ದಟ್ಟಣೆ, ಬೆಂಗಳೂರು ರಸ್ತೆ ಗುಂಡಿ ಸೇರಿ ಒಂದಿಲ್ಲೊಂದು ಕಾರಣಕ್ಕೆ ಬೆಂಗಳೂರು ಮಹಾನಗರ ಸದಾ ಸುದ್ದಿಯಲ್ಲಿದೆ. ಮಳೆಗಾಲ ಶುರುವಾದ ಕೂಡಲೇ ಬೆಂಗಳೂರಿನ ಹೊರ ವರ್ತುಲ ರಸ್ತೆಯ ಇಕೋಸ್ಪೇಸ್ ಫ್ಲೈಓವರ್‌ನಲ್ಲಿ ರಸ್ತೆ ಗುಂಡಿಗಳ ಹಾವಳಿಯಿಂದ ವಾಹನ ಸವಾರರ ಪರದಾಟದ ವೈರಲ್‌ ವಿಡಿಯೋ ಗಮನಸೆಳೆದಿದೆ. ಇದರ ವಿವರ ಇಲ್ಲಿದೆ.

ಬೆಂಗಳೂರಿನ ಹೊರ ವರ್ತುಲ ರಸ್ತೆಯ ಇಕೋಸ್ಪೇಸ್ ಫ್ಲೈಓವರ್‌ನಲ್ಲಿ ರಸ್ತೆ ಗುಂಡಿಗಳ ಹಾವಳಿ ಕಾರಣ ವಾಹನ ಸವಾರರ ಪರದಾಟ, ವೈರಲ್‌ ವಿಡಿಯೋದಿಂದ ತೆಗೆದ ಚಿತ್ರ.
ಬೆಂಗಳೂರಿನ ಹೊರ ವರ್ತುಲ ರಸ್ತೆಯ ಇಕೋಸ್ಪೇಸ್ ಫ್ಲೈಓವರ್‌ನಲ್ಲಿ ರಸ್ತೆ ಗುಂಡಿಗಳ ಹಾವಳಿ ಕಾರಣ ವಾಹನ ಸವಾರರ ಪರದಾಟ, ವೈರಲ್‌ ವಿಡಿಯೋದಿಂದ ತೆಗೆದ ಚಿತ್ರ.

ಬೆಂಗಳೂರು: ಮಳೆಗಾಲ ಶುರುವಾಗಿದ್ದೇ ತಡ, ಬೆಂಗಳೂರು ಮಹಾನಗರದ ರಸ್ತೆಗಳಲ್ಲಿ ಗುಂಡಿ ಕಾಣಿಸಿಕೊಳ್ಳಲಾರಂಭಿಸಿದೆ. ರಸ್ತೆಗುಂಡಿಗಳನ್ನು ಮುಚ್ಚುವುದಾಗಿ ಬಿಬಿಎಂಪಿ ಘೋಷಿಸಿದ ಬಳಿಕವೂ, ಅದು ಕಾರ್ಯಗತವಾದಂತೆ ಕಾಣುತ್ತಿಲ್ಲ. ಹೊರ ವರ್ತುಲ ರಸ್ತೆಯಲ್ಲಿರುವ ಇಕೋ ಸ್ಪೇಸ್‌ ಫ್ಲೈಓವರ್‌ನಲ್ಲಿ ರಸ್ತೆ ಹದಗೆಟ್ಟಿದ್ದು, ವಾಹನ ಸಂಚಾರ ಕಷ್ಟವಾಗಿದೆ. ಇಲ್ಲಿನ ವಾಹನ ಸಂಚಾರದ ವಿಡಿಯೋ ಸದ್ಯ ವೈರಲ್ ಆಗಿದೆ.

ಟ್ರೆಂಡಿಂಗ್​ ಸುದ್ದಿ

ಸಿಟಿಜೆನ್ಸ್ ಮೂವ್‌ಮೆಂಟ್‌, ಈಸ್ಟ್‌ ಬೆಂಗಳೂರು ಎಂಬ ಸಮುದಾಯದ ಎಕ್ಸ್‌ ಖಾತೆಯಲ್ಲಿ ಈ ವಿಡಿಯೋ ಶೇರ್ ಆಗಿದೆ. ವಿಡಿಯೋ ದೃಶ್ಯದಲ್ಲಿ ಒಂದು ಕಿ.ಮೀ. ಒಳಗಿನ ಅಂತರದಲ್ಲಿ ಹತ್ತಾರು ಗುಂಡಿಗಳು ಗೋಚರಿಸಿದವು. ಈ ಎಕ್ಸ್‌ ಖಾತೆಯಲ್ಲಿ ಶೇರ್ ಆಗಿರುವ ವಿಡಿಯೋದಲ್ಲಿ, ಬೆಂಗಳೂರು ಮಹಾನಗರದ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಕೋಟ್ ಮಾಡಿದ್ದು, ರಸ್ತೆ ಹಾಳಾಗಿದೆ. ಒಂದು ವರ್ಷದಿಂದ ಇದರ ದುರಸ್ತಿ ಆಗಿಲ್ಲ ಎಂಬುದರ ಬಗ್ಗೆ ಗಮನಸೆಳೆದಿದ್ದಾರೆ.

ಈ ನಡುವೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈ ಹಿಂದೆ ರಸ್ತೆಯಲ್ಲಿನ ಗುಂಡಿಗಳನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ (ಎಐ) ಕ್ಯಾಮೆರಾಗಳನ್ನು ಅಳವಡಿಸಿದೆ ಎಂದು ಹೇಳಿಕೊಂಡಿತ್ತು. ಗುಂಡಿಗಳ ಜೊತೆಗೆ, ಈ ಕ್ಯಾಮೆರಾಗಳು ಹಾನಿಗೊಳಗಾದ ಬೀದಿ ದೀಪಗಳು, ಕಾಲುದಾರಿ, ಅಪಾಯಕ್ಕೆ ಕಾರಣವಾಗುವ ಇತರ ವಸ್ತುಗಳನ್ನು ಸಹ ಸೆರೆಹಿಡಿಯುತ್ತವೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, "ಎಐ ಕ್ಯಾಮೆರಾಗಳನ್ನು ಅಳವಡಿಸಲಾದ ಈ ವಾಹನಗಳು ಗಂಟೆಗೆ 5 ಕಿ.ಮೀ ವೇಗದಲ್ಲಿ ಚಲಿಸುತ್ತವೆ ಮತ್ತು ಎಲ್ಲಾ 15 ವಾಹನಗಳು ಒಟ್ಟಾಗಿ ದಿನಕ್ಕೆ 300 ಕಿ.ಮೀ ಕ್ರಮಿಸುತ್ತವೆ. ಈ ಕ್ಯಾಮೆರಾಗಳು ಸಂಗ್ರಹಿಸಿದ ದತ್ತಾಂಶವು ನಾಗರಿಕ ಅಧಿಕಾರಿಗಳಿಗೆ ರಸ್ತೆಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದರು.

ಬೆಂಗಳೂರು ರಸ್ತೆ ಗುಂಡಿ; ವಿಡಿಯೋ ಕಥಾನಕ ಹೀಗಿದೆ ನೋಡಿ

“ಆತ್ಮೀಯ ಡಿಕೆ ಶಿವಕುಮಾರ್‌ ಸರ್, ಇದು ಬೆಂಗಳೂರಿನ ಐಟಿ ಕಾರಿಡಾರ್‌ನ ಬೆನ್ನೆಲುಬಾಗಿರುವ ಒಆರ್‌ಆರ್‌ನಲ್ಲಿನ ಇಕೋಸ್ಪೇಸ್ ಫ್ಲೈಓವರ್ ಆಗಿದೆ. ರಸ್ತೆ ಹಾಳಾಗಿದೆ! ನಿಮ್ಮ ಸಲಹೆಗಾರರು ನಿಮಗೆ ಏನು ತೋರಿಸುತ್ತಾರೆ” ಎಂದು ಸಿಟಿಜೆನ್ಸ್ ಮೂವ್‌ಮೆಂಟ್‌, ಈಸ್ಟ್‌ ಬೆಂಗಳೂರು ವಿಡಿಯೋ ಜೊತೆಗೆ ಸಂದೇಶವನ್ನೂ ರವಾನಿಸಿದೆ.

ಕುಶಾಲ್ ಎಂಬುವವರು ಶೇರ್ ಮಾಡಿದ್ದ ವಿಡಿಯೋವನ್ನು ಸಿಟಿಜೆನ್ಸ್ ಮೂವ್‌ಮೆಂಟ್‌, ಈಸ್ಟ್‌ ಬೆಂಗಳೂರು ರೀ ಶೇರ್ ಮಾಡಿದೆ. ಇದನ್ನು 1.38 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, 300ಕ್ಕೂ ಹೆಚ್ಚು ಜನ ಪ್ರತಿಕ್ರಿಯಿಸಿದ್ದಾರೆ.

ಎಕ್ಸ್‌ ಖಾತೆಯ ಪೋಸ್ಟ್‌ಗೆ ಜನರ ಪ್ರತಿಕ್ರಿಯೆ ಹೀಗಿದೆ ನೋಡಿ

ಈ ರಸ್ತೆಯ ಸ್ಥಿತಿ ಈಗ ಹಲವಾರು ವರ್ಷಗಳಿಂದ ಹಾಗೆಯೇ ಉಳಿದಿದೆ ಎಂದು ಜನರು ದೂರಿದ್ದಾರೆ. ಬಳಕೆದಾರರೊಬ್ಬರು “ಒಂದು ತಿದ್ದುಪಡಿ ಇದೆ. ಈ ಫ್ಲೈಓವರ್ ಐದು ವರ್ಷಗಳಿಂದ ಹಾಗೆಯೇ ಉಳಿದಿದೆ. ನಾನು 2018 ರಲ್ಲಿ ವೈಟ್‌ಫೀಲ್ಡ್‌ನಿಂದ ಇಕೋಸ್ಪೇಸ್‌ನಲ್ಲಿರುವ ಎಚ್ಎಸ್‌ಬಿಸಿ ಕಚೇರಿಗೆ ಚಾಲನೆ ಮಾಡುತ್ತಿದ್ದೆ ಮತ್ತು ಆ ಸಮಯದಲ್ಲಿ ಅದು ಅದೇ ಸ್ಥಿತಿಯಲ್ಲಿತ್ತು” ಎಂಬುದನ್ನು ನೆನಪಿಸಿಕೊಂಡಿದ್ಧಾರೆ.

ಇನ್ನೊಬ್ಬ ಬಳಕೆದಾರರು, “ಒಂದು ವರ್ಷದಲ್ಲಿ? ಅದು ಒಂದು ತಮಾಷೆ. ಈ 2-3 ಪ್ರಮುಖ ಅಡೆತಡೆಗಳು 3-4 ವರ್ಷಗಳಿಗಿಂತ ಹೆಚ್ಚು ಕಾಲ ಇವೆ ಎಂದು ನನಗೆ ನೆನಪಿದೆ. ಬಿಬಿಎಂಪಿ ಆಯುಕ್ತರೇ- ನಿಮಗೆ ಒಂದು ಕಾರಣಕ್ಕಾಗಿ ಸಂಬಳ ನೀಡಲಾಗುತ್ತದೆ. ಸಾರ್ವಜನಿಕ ಮಾನ್ಯತೆ ಹೆಚ್ಚು ಇರುವಲ್ಲಿ ಕನಿಷ್ಠ ವಿಷಯಗಳನ್ನು ಸರಿಪಡಿಸಿ. ನೀವು ಬೆಂಗಳೂರು ಬ್ರ್ಯಾಂಡ್ ಮೇಲೆ ಗಂಭೀರ ಪರಿಣಾಮ ಬೀರಿದ್ದೀರಿ” ಎಂದು ಹೇಳಿದ್ಧಾರೆ.

ಟಿ20 ವರ್ಲ್ಡ್‌ಕಪ್ 2024