ಕನ್ನಡ ಸುದ್ದಿ  /  ಕ್ರಿಕೆಟ್  /  Ind Vs Sa Final: ಭಾರತ- ದಕ್ಷಿಣ ಆಫ್ರಿಕಾ ಟಿ20 ವಿಶ್ವಕಪ್‌ ಫೈನಲ್‌ನ ಎಲ್ಲಾ ಪ್ರಶ್ನೆಗಳಿಗೂ ಇಲ್ಲಿದೆ ಉತ್ತರ; ಮಳೆ ಬಂದ್ರೆ ಏನ್ಕತೆ

IND vs SA final: ಭಾರತ- ದಕ್ಷಿಣ ಆಫ್ರಿಕಾ ಟಿ20 ವಿಶ್ವಕಪ್‌ ಫೈನಲ್‌ನ ಎಲ್ಲಾ ಪ್ರಶ್ನೆಗಳಿಗೂ ಇಲ್ಲಿದೆ ಉತ್ತರ; ಮಳೆ ಬಂದ್ರೆ ಏನ್ಕತೆ

IND vs ENG T20 World Cup 2024 Final Full Details: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಟಿ20 ವಿಶ್ವಕಪ್‌ ಕ್ರಿಕೆಟ್‌ 2024 ಫೈನಲ್‌ ಜೂನ್‌ 29, 2024ರಂದು ಕೆನ್ಸಿಂಗ್ಟನ್ ಓವಲ್ ಬಾರ್ಬಡೋಸ್‌ನಲ್ಲಿ ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ನಡೆಯಲಿದೆ. ಎರಡನೇ ಬಾರಿ ಫೈನಲ್‌ ಗೆಲ್ಲುವ ಅವಕಾಶ ಭಾರತಕ್ಕಿದೆ

IND vs SA final: ಭಾರತ- ದಕ್ಷಿಣ ಆಫ್ರಿಕಾ ಟಿ20 ವಿಶ್ವಕಪ್‌ ಫೈನಲ್‌ ವಿವರ
IND vs SA final: ಭಾರತ- ದಕ್ಷಿಣ ಆಫ್ರಿಕಾ ಟಿ20 ವಿಶ್ವಕಪ್‌ ಫೈನಲ್‌ ವಿವರ

IND vs ENG, T20 World Cup 2024 Final: ರೋಚಕ ಪಂದ್ಯದಲ್ಲಿ ಟೀಮ್‌ ಇಂಡಿಯಾ ಇಂಗ್ಲೆಂಡ್‌ ಅನ್ನು ಮಣಿಸಿ ಟಿ20 ವಿಶ್ವಕಪ್‌ 2024ರ ಫೈನಲ್‌ ಪ್ರವೇಶಿಸಿದೆ. ಟಿ20 ವಿಶ್ವಕಪ್‌ ಫೈನಲ್‌ಗೆ ಭಾರತ ಪ್ರವೇಶಿಸುತ್ತಿರುವುದು ಇದು ಮೂರನೇ ಬಾರಿ. ಇದಕ್ಕೂ ಮುನ್ನ 2007ರಲ್ಲಿ ಮತ್ತು 2014ರಲ್ಲಿ ಟೀಂ ಇಂಡಿಯಾ ಟಿ20 ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿತ್ತು. ಫೈನಲ್‌ನಲ್ಲಿ ಗೆದ್ದದ್ದು ಮಾತ್ರ ಒಂದೇ ಬಾರಿ. ಗಯಾನಾದಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 68 ರನ್‌ಗಳಿಂದ ಸೋಲಿಸಿದೆ. . ಇಂಗ್ಲೆಂಡ್ ಗೆಲುವಿಗೆ 172 ರನ್ ಗಳ ಗುರಿ ಇತ್ತು. ಆದರೆ ಭಾರತದ ಸ್ಪಿನ್ ಬೌಲಿಂಗ್ ಮುಂದೆ ಇಡೀ ಇಂಗ್ಲೆಂಡ್ ತಂಡ 16.4 ಓವರ್ ಗಳಲ್ಲಿ ಕೇವಲ 103 ರನ್ ಗಳಿಸಿ ಕುಸಿದು ಬಿದ್ದಿತು. ಹ್ಯಾರಿ ಬ್ರೂಕ್ ಅವರು 25 ರನ್‌ಗಳ ಗರಿಷ್ಠ ಇನ್ನಿಂಗ್ಸ್‌ಗಳನ್ನು ಆಡಿದರು. ಬ್ರೂಕ್ ಹೊರತುಪಡಿಸಿ, ಜೋಸ್ ಬಟ್ಲರ್ 23 ರನ್ ಗಳಿಸಿದರು. ಇಂಗ್ಲೆಂಡ್‌ನ 7 ಬ್ಯಾಟ್ಸ್‌ಮನ್‌ಗಳು ಎರಡಂಕಿ ತಲುಪಲು ಸಾಧ್ಯವಾಗಲಿಲ್ಲ. ಪರಿಣಾಮ ಇಂಗ್ಲೆಂಡ್‌ ಸೋಲು ಅನುಭವಿಸಿತು. ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ತಲಾ 3 ವಿಕೆಟ್ ಪಡೆದರು. ಜಸ್ಪ್ರೀತ್ ಬುಮ್ರಾ 2 ವಿಕೆಟ್ ಪಡೆದರು. ಈ ಮೂಲಕ 2022ರಲ್ಲಿ ಇಂಗ್ಲೆಂಡ್ ವಿರುದ್ಧದ 10 ವಿಕೆಟ್‌ಗಳ ಹೀನಾಯ ಸೋಲಿಗೆ ಟೀಂ ಇಂಡಿಯಾ ಸೇಡು ತೀರಿಸಿಕೊಂಡಿದೆ.

ಟ್ರೆಂಡಿಂಗ್​ ಸುದ್ದಿ

ಭಾರತ ಮತ್ತು ದಕ್ಷಿಣ ಆಫ್ರಿಕಾ ಫೈನಲ್‌ ಕೈಪಿಡಿ (IND vs SA final)

ಭಾರತ ಮತ್ತು ದಕ್ಷಿಣ ಆಫ್ರಿಕಾ ಫೈನಲ್‌ ದಿನಾಂಕ: ಜೂನ್‌ 29, 2024
ದಕ್ಷಿಣ ಆಫ್ರಿಕಾ ಮತ್ತು ಭಾರತ ಫೈನಲ್‌ ಪಂದ್ಯ ನಡೆಯುವ ಸಮಯ: ರಾತ್ರಿ 8 ಗಂಟೆ (ಭಾರತೀಯ ಕಾಲಮಾನ)
ಟಾಸ್‌ ಸಮಯ: ರಾತ್ರಿ 7.30
ಪಂದ್ಯ ನಡೆಯುವ ಸ್ಥಳ: ಕೆನ್ಸಿಂಗ್ಟನ್ ಓವಲ್ ಬಾರ್ಬಡೋಸ್‌
ಸೆಮಿ ಫೈನಲ್‌ನಲ್ಲಿ ಗೆದ್ದದ್ದು ಯಾರು?: ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ ಗೆಲುವು
ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಈ ಹಿಂದೆ ಗೆದ್ದವರು ಯಾರು?: ಇಂಗ್ಲೆಂಡ್‌ (2022), 2021 (ಆಸ್ಟ್ರೇಲಿಯಾ)
ಯಾವ ಒಟಿಟಿಯಲ್ಲಿ ಟಿ20 ವಿಶ್ವಕಪ್‌ ಫೈನಲ್‌ ವೀಕ್ಷಿಸಬಹುದು?: ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ (ಮೊಬೈಲ್‌ ಬಳಕೆದಾರರಿಗೆ ಉಚಿತ)
ಟಿ20 ವಿಶ್ವಕಪ್‌ ಫೈನಲ್‌ ಭಾರತ ಎಷ್ಟು ಬಾರಿ ಗೆದ್ದಿದೆ?: 1 ಬಾರಿ

ಟಿ20 ವಿಶ್ವಕಪ್‌ 2024ನಲ್ಲಿ ಭಾರತಕ್ಕೆ ಗೆಲ್ಲುವ ಅವಕಾಶ

ಇಂಗ್ಲೆಂಡ್‌ ವಿರುದ್ಧ ಗೆದ್ದ ಭಾರತಕ್ಕೆ ನಾಳೆ ದಕ್ಷಿಣ ಆಫ್ರಿಕಾ ಎದುರಾಳಿ. ನಾಳೆ ಗೆದ್ದರೆ ಭಾರತ ಎರಡನೇ ಬಾರಿ ಟಿ20 ವಿಶ್ವಕಲ್‌ 2024ರ ಫೈನಲ್‌ ಗೆದ್ದ ಹಿರಿಮೆಗೆ ಪಾತ್ರವಾಗಲಿದೆ. ಜೂನ್ 29 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಈ ಪಂದ್ಯ ಕೆನ್ಸಿಂಗ್ಟನ್ ಓವಲ್ ಬಾರ್ಬಡೋಸ್‌ನಲ್ಲಿ ನಡೆಯಲಿದೆ. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು 9 ವಿಕೆಟ್‌ಗಳಿಂದ ಸೋಲಿಸುವ ಮೂಲಕ ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ಟಿ20 ವಿಶ್ವಕಪ್‌ನ ಫೈನಲ್‌ಗೆ ಪ್ರವೇಶಿಸಿದೆ. ಟಿ20 ವಿಶ್ವಕಪ್‌ನ ಅಂತಿಮ ಪಂದ್ಯ ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿದ್ದು, ಟಾಸ್ ಅರ್ಧ ಗಂಟೆ ಮುಂಚಿತವಾಗಿ ಅಂದರೆ ರಾತ್ರಿ 7.30ಕ್ಕೆ ನಡೆಯಲಿದೆ. ಟೀಮ್‌ ಇಂಡಿಯಾದ ಪರ್ಫಾಮೆನ್ಸ್‌ ನೋಡಲು ಭಾರತದ ಕ್ರಿಕೆಟ್‌ ಪ್ರೇಮಿಗಳು ಕಾತರರಾಗಿದ್ದಾರೆ. ಈ ವೀಕೆಂಡ್‌ಗೆ ಕ್ರಿಕೆಟ್‌ ಪ್ರೇಮಿಗಳಿಗೆ ಹಬ್ಬವಾಗುವುದೇ ಕಾದು ನೋಡಬೇಕಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಲಿರುವ ಟಿ20 ವಿಶ್ವಕಪ್‌ನ ಈ ಅಂತಿಮ ಪಂದ್ಯಕ್ಕೆ ಐಸಿಸಿ ಮೀಸಲು ದಿನವನ್ನೂ ನಿಗದಿಪಡಿಸಿದೆ. ಈ ಮಳೆಗಾಲದಲ್ಲಿ ಯಾವಾಗ ಧೋ ಎಂದು ಮಳೆ ಸುರಿಯುತ್ತದೆ ಎಂದು ಹೇಳಲಾಗದು. ಮಳೆಯಿಂದಾಗಿ ಈ ಪಂದ್ಯವನ್ನು ಜೂನ್ 29 ರಂದು ನಡೆಸಲು ಸಾಧ್ಯವಾಗದಿದ್ದರೆ, ಮರುದಿನ ಅಂದರೆ ಜೂನ್ 30 ಕ್ಕೆ ಪೂರ್ಣಗೊಳ್ಳುತ್ತದೆ. ಟೀಮ್ ಇಂಡಿಯಾ ಎರಡನೇ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲುವ ಅವಕಾಶವನ್ನು ಹೊಂದಿದೆ. ದಕ್ಷಿಣ ಆಫ್ರಿಕಾ ತಂಡವು ಮೊದಲ ಬಾರಿಗೆ ಚಾಂಪಿಯನ್ ಆಗುವ ಗುರಿಯನ್ನು ಹೊಂದಿದೆ. ಈಗಾಗಲೇ ಒಂದು ಬಾರಿ ಟಿ20 ವಿಶ್ವಕಪ್‌ ಗೆದ್ದಿರುವ ಭಾರತ ಈ ಬಾರಿಯೂ ಗೆಲ್ಲಲಿದೆ ಎಂದು ಟೀಮ್‌ ಇಂಡಿಯಾ ಫ್ಯಾನ್ಸ್‌ ನಿರೀಕ್ಷೆ ಹೊಂದಿದ್ದಾರೆ.

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ