ಕನ್ನಡ ಸುದ್ದಿ  /  ಮನರಂಜನೆ  /  Emergency Movie: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜೀವನಚರಿತ್ರೆ ಎಮರ್ಜೆನ್ಸಿ ಬಿಡುಗಡೆ ದಿನಾಂಕ ಪ್ರಕಟಿಸಿದ ಸಂಸದೆ ಕಂಗನಾ ರಣಾವತ್‌

Emergency Movie: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜೀವನಚರಿತ್ರೆ ಎಮರ್ಜೆನ್ಸಿ ಬಿಡುಗಡೆ ದಿನಾಂಕ ಪ್ರಕಟಿಸಿದ ಸಂಸದೆ ಕಂಗನಾ ರಣಾವತ್‌

Kangana Ranaut Emergency Movie: ಸಂಸದೆ, ನಟಿ ಕಂಗನಾ ರಣಾವತ್‌ ನಟಿಸಿರುವ ಎಮರ್ಜೆನ್ಸಿ ಸಿನಿಮಾವು ಸೆಪ್ಟೆಂಬರ್‌ 7, 2024ರಂದು ಬ���ಡುಗಡೆಯಾಗಲಿದೆ. ಇಂದಿರಾ ಗಾಂಧಿ ಭಾರತದಲ್ಲಿ ತುರ್ತುಪರಿಸ್ಥಿತಿ ಏರಿದ ಘಟನೆಯ ಕಥೆಯನ್ನು ಈ ಸಿನಿಮಾ ಹೊಂದಿದೆ.

Emergency Movie: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜೀವನಚರಿತ್ರೆ ಎಮರ್ಜೆನ್ಸಿ ಬಿಡುಗಡೆ ದಿನಾಂಕ
Emergency Movie: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜೀವನಚರಿತ್ರೆ ಎಮರ್ಜೆನ್ಸಿ ಬಿಡುಗಡೆ ದಿನಾಂಕ

ಬೆಂಗಳೂರು: ಬಾಲಿವುಡ್‌ ನಟಿ, ಲೋಕಸಭಾ ಚುನಾವಣೆ ಬಳಿಕ ಸಂಸದೆಯಾಗಿರುವ ಕಂಗನಾ ರಣಾವತ್‌ ಇದೀಗ ತನ್ನ ಮುಂಬರುವ "ಎಮರ್ಜೆನ್ಸಿ" ಸಿನಿಮಾದ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಅಪ್‌ಡೇಟ್‌ ನೀಡಿರುವ ನಟಿಯು ಸಿನಿಮಾದ ಹೊಸ ಪೋಸ್ಟರ್‌ ಕೂಡ ಹಂಚಿಕೊಂಡಿದ್ದಾರೆ. ಇಂದಿರಾ ಗಾಂಧಿ ಕನ್ನಡಕದಂಚಿನಲ್ಲಿ ನೋಡುತ್ತಿರುವಂತಹ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಕಂಗನಾ ರಣಾವತ್‌ ಅವರು ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಎಮರ್ಜೆನ್ಸಿ ಬಿಡುಗಡೆ ದಿನಾಂಕ

ಭಾರತದ ಮಾಜಿ ಪ್ರಧಾನಮಂತ್ರಿ ದಿವಂಗತ ಇಂದಿರಾ ಗಾಂಧಿಯವರ ಬಯೋಪಿಕ್‌ ಬಿಡುಗಡೆ ಮಾಡಲಾಗುವುದು ಎಂದು ಚುನಾವಣೆಯ ಮುನ್ನವೇ ಕಂಗನಾ ರಣಾವತ್‌ ಘೋಷಣೆ ಮಾಡಿದ್ದರು. ಈ ಪೋಸ್ಟರ್‌ನಲ್ಲಿ ಕಂಗನಾ ರಣಾವತ್‌ ಕ್ಯಾಮೆರಾದಿಂದ ಬೇರೆ ಕಡೆಗೆ ದೃಷ್ಟಿ ಹರಿಸಿರುವುದನ್ನು ಕಾಣಬಹುದು. ಕಂಗನಾ ರಣಾವತ್‌ ನಟನೆಯ ಎಮರ್ಜೆನ್ಸಿ ಸಿನಿಮಾವು ಸೆಪ್ಟೆಂಬರ್‌ 7, 2024ರಂದು ಬಿಡುಗಡೆಯಾಗಲಿದೆ.

"ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಆರಂಭದ 50 ವರ್ಷಗಳ ಕರಾಳ ಅಧ್ಯಾಯವಿದು. ಸೆಪ್ಟೆಂಬರ್‌ 6, 2024ರಂದು ಕಂಗನಾ ರಣಾವತ್‌ ಅವರ ಎಮರ್ಜೆನ್ಸಿ ಸಿನಿಮಾವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಅತ್ಯಂತ ವಿವಾದವಾಗಿರುವ ವಿಚಾರವನ್ನು ಈ ಚಿತ್ರದಲ್ಲಿ ತೋರಿಸಲಾಗುವುದು" ಎಂದು ಕಂಗನಾ ರಣಾವತ್‌ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಎಮರ್ಜೆನ್ಸಿ ಸಿನಿಮಾ ಹಲವು ಬಾರಿ ವಿಳಂಬ

ಕಳೆದ ತಿಂಗಳು ಲೋಕಾ ಸಭೆ ಚುನಾವಣೆಯ ಹಿನ್ನಲೆಯಲ್ಲಿ ಎಮರ್ಜೆನ್ಸಿ ಸಿನಿಮಾದ ಬಿಡುಗಡೆ ದಿನಾಂಕ ವಿಳಂಬವಾಗಿತ್ತು. ಈ ಸಿನಿಮಾದ ನಾಯಕಿ ಪಾತ್ರದಲ್ಲಿ ನಟಿಸಿರುವ ಕಂಗನಾ ರಣಾವತ್‌ ಸಿನಿಮಾದ ಬರಹಗಾರ್ತಿ, ನಿರ್ದೇಶಕಿ ಮತ್ತು ನಿರ್ಮಾಪಕಿಯೂ ಹೌದು. ಮಣಿಕರ್ಣಿಕಾ ಫಿಲ್ಮ್‌ ಪ್ರೊಡಕ್ಷನ್‌ನಡಿ ಈ ಸಿನಿಮಾವನ್ನು ನಿರ್ಮಿಸಲಾಗುತ್ತಿದೆ. 

ಎಮರ್ಜೆನ್ಸಿ ಸಿನಿಮಾದ ಪಾತ್ರ ವರ್ಗ

ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ರಣಾವತ್

ಅನುಪಮ್ ಖೇರ್ ಅವರಿಗೆ ಜಯಪ್ರಕಾಶ ನಾರಾಯಣ ಪಾತ್ರ

ಅಟಲ್ ಬಿಹಾರಿ ವಾಜಪೇಯಿಯಾಗಿ ಶ್ರೇಯಸ್ ತಲ್ಪಾಡೆ

ಮೊರಾರ್ಜಿ ದೇಸಾಯಿ ಪಾತ್ರದಲ್ಲಿ ಅಶೋಕ್ ಛಾಬ್ರಾ

ಪುಪುಲ್ ಜಯಕರ್ ಪಾತ್ರದಲ್ಲಿ ಮಹಿಮಾ ಚೌಧರಿ, ಇಂದಿರಾ ಗಾಂಧಿಯವರ ನಿಕಟವರ್ತಿ

ಮಿಲಿಂದ್ ಸೋಮನ್ ಅವರು ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ಷಾ ಪಾತ್ರದಲ್ಲಿ ನಟಿಸಿದ್ದಾರೆ.

ಸಂಜಯ್ ಗಾಂಧಿಯಾಗಿ ವಿಶಾಕ್ ನಾಯರ್

ಜಗಜೀವನ್ ರಾಮ್ ಆಗಿ ಸತೀಶ್ ಕೌಶಿಕ್

ಲೆಫ್ಟಿನೆಂಟ್ ಜನರಲ್ ಆಗಿ ಲ್ಯಾರಿ ನ್ಯೂಯಾರ್ಕರ್

ಜಾರ್ಜಸ್ ಪಾಂಪಿಡೌ ಪಾ��್ರದಲ್ಲಿ ಕ್ರಿಸ್ಟೋಫ್ ಗೈಬೆಟ್

ಫಿರೋಜ್ ಗಾಂಧಿ ಪಾತ್ರದಲ್ಲಿ ಅಧೀರ್ ಭಟ್

ದೂರದರ್ಶನ ವರದಿಗಾರನಾಗಿ ಮನ್ವೀರ್ ಚೌಧರಿ

ಕಮಲಾ ನೆಹರು ಪಾತ್ರದಲ್ಲಿ ಝೀಬಾ ಹುಸೇನ್

ಚೆಫ್ ನೆಪೋಲಿಯನ್ ಆಗಿ ಸಿರಿಲ್ ಮನ್ಸುಯ್

ರಾಜು ಕುಮಾರ್ ವಿರೋಧ ಪಕ್ಷದ ಸಂಸದರಾಗಿ

ಎಮರ್ಜೆನ್ಸಿ ಸಿನಿಮಾದ ಕುರಿತು

1975ರ ಜೂನ್‌ 25ರಂದು ಪ್ರಧಾನ ಮಂತ್ರಿ ಇಂರಿರಾ ಗಾಂಧಿ ಸಲಹೆಯ ಮೇರೆಗೆ ರಾಷ್ಟ್ರಪತಿ ಫಕ್ರುದ್ದೀನ್‌ ಅಲಿ ಅಹಮ್ಮದ್‌ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು. ಈ ವರ್ಷ ಜೂನ್‌ 25ಕ್ಕೆ ತುರ್ತು ಪರಿಸ್ಥಿತಿಗೆ 49 ವರ್ಷವಾಗಲಿದೆ ಐವತ್ತನೇ ವರ್ಷಕ್ಕೆ ಕಾಲಿಡುವ ಸಮಯದಲ್ಲಿಯೇ ಕಂಗನಾ ರಣಾವತ್‌ ಅವರು ಎಮರ್ಜೆನ್ಸಿ ಬಯೋಪಿಕ್‌ ಮಾಡುತ್ತಿದ್ದಾರೆ. ಪ್ರಧಾನಿ ಇಂದಿರಾ ಗಾಂಧಿ ಚುನಾವಣೆಯಲ್ಲಿ ಆಯ್ಕೆಯಾಗಿರುವುದನ್ನು ರದ್ದುಗೊಳಿಸಿ ಹೈಕೋರ್ಟ್‌ ಆದೇಶ ನೀಡಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿತ್ತು. ಈ ಆದೇಶ ಬಂದ ಮರುದಿನವೇ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು. ಈ ಕ್ರಮಕ್ಕೆ ಎಲ್ಲೆಡೆ ಟೀಕೆ ವ್ಯಕ್ತವಾಗಿತ್ತು.

ಟಿ20 ವರ್ಲ್ಡ್‌ಕಪ್ 2024