ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ನಿಮ್ಹಾನ್ಸ್ ಸಮೀಪದ ರಿಮಾಂಡ್ ಹೋಮ್‌ನಿಂದ 6 ಬಾಲಕಿಯರು ಪರಾರಿ, ಹುಡುಕಾಟದಲ್ಲಿದ್ದಾರೆ ಪೊಲೀಸರು; ಇನ್ನಿತರ ಅಪರ���ಧ ಸುದ್ದಿ

ಬೆಂಗಳೂರು ನಿಮ್ಹಾನ್ಸ್ ಸಮೀಪದ ರಿಮಾಂಡ್ ಹೋಮ್‌ನಿಂದ 6 ಬಾಲಕಿಯರು ಪರಾರಿ, ಹುಡುಕಾಟದಲ್ಲಿದ್ದಾರೆ ಪೊಲೀಸರು; ಇನ್ನಿತರ ಅಪರಾಧ ಸುದ್ದಿ

ಬೆಂಗಳೂರು ಅಪರಾಧ ಸುದ್ದಿ; ಬೆಂಗಳೂರಿನ ರಿಮಾಂಡ್‌ ಹೋಂನಿಂದ 6 ಬಾಲಕಿಯರು ಪರಾರಿಯಾಗಿದ್ದು, ಅವರ ಹುಡುಕಾಟದಲ್ಲಿದ್ದಾರೆ ಪೊಲೀಸರು. ಪ್ರತ್ಯೇಕ ಪ್ರಕರಣದಲ್ಲಿ, ಬಾರ್‌ನಲ್ಲಿ ಗುರಾಯಿಸಿದ್ದಕ್ಕೆ ಬಿಯರ್‌ ಬಾಟೆಲ್‌ನಿಂದ ಹೊಡೆದು ಕೊಲೆ ಮಾಡಿದ ಘಟನೆ ನಡೆದಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರಿನ ರಿಮಾಂಡ್‌ ಹೋಂನಿಂದ 6 ಬಾಲಕಿಯರು ಪರಾರಿಯಾಗಿದ್ದು,  ಪೊಲೀಸರು ಅವರ ಹುಡುಕಾಟದಲ್ಲಿದ್ದಾರೆ. (ಎಐ ರಚಿತ ಸಾಂಕೇತಿಕ ಚಿತ್ರ)
ಬೆಂಗಳೂರಿನ ರಿಮಾಂಡ್‌ ಹೋಂನಿಂದ 6 ಬಾಲಕಿಯರು ಪರಾರಿಯಾಗಿದ್ದು, ಪೊಲೀಸರು ಅವರ ಹುಡುಕಾಟದಲ್ಲಿದ್ದಾರೆ. (ಎಐ ರಚಿತ ಸಾಂಕೇತಿಕ ಚಿತ್ರ) (perchance.org/ Canva)

ಬೆಂಗಳೂರು: ನಾಟಕೀಯ ಬೆಳವಣಿಗೆಯೊಂದರಲ್ಲಿ ಬೆಂಗಳೂರಿನ ನಿಮ್ಹಾನ್ಸ್‌ ಸಮೀಪ ಇರುವ ರಿಮಾಂಡ್‌ ಹೋಂನಿಂದ 6 ಅಪ್ರಾಪ್ತ ವಯಸ್ಸಿನ ಬಾಲಕಿಯರು ತಪ್ಪಿಸಿಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಇವರೆಲ್ಲರೂ 16 ರಿಂದ 17 ವರ್ಷ ವಯೋಮಾನದ ಬಾಲಕಿಯರಾಗಿದ್ದು ವಿವಿಧ ಪ್ರಕರಣಗಳಲ್ಲಿ ರಿಮಾಂಡ್‌ ಹೋಂ ಸೇರಿದ್ದರು.

ಟ್ರೆಂಡಿಂಗ್​ ಸುದ್ದಿ

ಈ ರಿಮಾಂಡ್‌ ಹೋಮ್‌ ಸಿದ್ದಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬರುತ್ತದೆ. ಪೊಲೀಸರ ಪ್ರಕಾರ ಈ ಬಾಲಕಿಯರು ಪರಾರಿಯಾಗಲು ಮುಂಚಿತವಾಗಿ ಯೋಜನೆ ರೂಪಿಸಿದ್ದರು ಎಂದು ಊಹಿಸಿದ್ದಾರೆ. ಸಾಕಷ್ಟು ಮುಂಚಿತವಾಗಿ ಈ ಬಾಲಕಿಯರು ಸಂಚು ರೂಪಸಿ ಇವರೆಲ್ಲರೂ ಗುರುವಾರ ಬೆಳ್ಳಂಬೆಳಗ್ಗೆ ರಿಮಾಂಡ್‌ ಹೋಂನಿಂದ ತಪ್ಪಿಸಿಕೊಂಡಿದ್ದಾರೆ.

ಇವರನ್ನು ತಡೆಯಲು ಭದ್ರತಾ ಸಿಬ್ಬಂದಿ ಪ್ರಯತ್ನಿಸಿದ್ದಾರೆ. ಆಗ ಈ ಬಾಲಕಿಯರು ಭದ್ರತಾ ಸಿಬ್ಬಂದಿಗೆ ಕಚ್ಚಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕಿಯರ ಪತ್ತೆಗಾಗಿ ತನಿಖೆ ನಡೆಯುತ್ತಿದೆ. ಬಾಲಕಿಯರು ಹೋಗಿರಬಹುದಾದ ಸಾಧ್ಯತೆಗಳಿರುವ ಎಲ್ಲ ಸ್ಥಳಗಳಲ್ಲಿ ಹುಡುಕಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾರ್‌ನಲ್ಲಿ ವ್ಯಕ್ತಿಯೊಬ್ಬರ ಕೊಲೆ

ಬೆಂಗಳೂರಿನ ಬನ್ನೇರುಘಟ್ಟದ ರಸ್ತೆಯ ಬಾರ್‌ ವೊಂದರಲ್ಲಿ ನಡೆದ ಸಣ್ಣ ಜಗಳದಲ್ಲಿ ವ್ಯಕ್ತಿಯೊಬ್ಬರ ಕೊಲೆ ನಡೆದಿದೆ. ಕೊಲೆಗೀಡಾದ ವ್ಯಕ್ತಿ ಅಲ್ಲಿಯೇ ಇದ್ದ ಇಬ್ಬರನ್ನು ಗುರಾಯಿಸಿದ ಎಂಬ ಕಾರಣಕ್ಕೆ ಈ ಕೊಲೆ ನಡೆದಿದೆ. ಮೃತ ವ್ಯಕ್ತಿಯನ್ನು 35 ವರ್ಷದ ಹರ್ಷವರ್ಧನ್‌ ಎದು ಗುರುತಿಸಲಾಗಿದೆ.

ಈತ ಬಾರ್‌ ನಲ್ಲಿ ಮದ್ಯ ಸೇವಿಸುತ್ತಾ ಕುಳಿತು ತನ್ನ ಪಾಡಿಗೆ ತಾನು ಕುಡಿಯುವುದನ್ನು ಬಿಟ್ಟು ಎದುರು ಕುಳಿತಿದ್ದ ಇಬ್ಬರು ವ್ಯಕ್ತಿಗಳನ್ನು ಗುರಾಯಿಸಿಕೊಂಡು ನೋಡಿದ್ದಾನೆ. ಇದರಿಂದ ಮೂವರ ನಡುವೆ ಘರ್ಷಣೆ ನಡೆದಿದೆ. ಈ ಜೋರು ಗಲಾಟೆ ಕೆಲವೇ ಕ್ಷಣಗಳಲ್ಲಿ ಹಿಂಸಾಚಾರಕ್ಕೆ ತಿರುಗಿದೆ.

ಈತನ ವರ್ತನೆಯಿಂದ ಕೋಪಗೊಂಡ ಇಬ್ಬರು ವ್ಯಕ್ತಿಗಳು ಹರ್ಷವರ್ಧನ್‌ ತಲೆಗೆ ಬಿಯರ್‌ ಬಾಟೆಲ್‌ ನಿಂದ ಹೊಡೆದಿದ್ದಾರೆ. ಈ ಹೊಡೆತದಿಂದ ಹರ್ಷವರ್ಧನ್‌ ತಲೆಗೆ ಬಲವಾದ ಪೆಟ್ಟು ಬಿದ್ದು, ಸ್ಥಳದಲ್ಲಿಯೇ ಅಸುನೀಗಿದ್ದಾನೆ. ಆರೋಪಿಗಳು ಕೂಡಲೆ ಅಲ್ಲಿಂದ ಪರಾರಿಯಾಗಿದ್ದಾರೆ. ಬಾರ್‌ ಮ್ಯಾನೇಜರ್‌ ಪೊಲೀಸರಿಗೆ ಸುದ್ದಿ ತಲುಪಿಸಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

(ವರದಿ- ಎಚ್.ಮಾರುತಿ, ಬೆಂಗಳೂರು)

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

ಓದಬಹುದಾದ ಇನ್ನಷ್ಟು ಸುದ್ದಿಗಳಿವು

1) ದರ್ಶಿನಿ ಹೋಟೆಲ್‌ನಲ್ಲಿ ಕೆಲಸ ಕಳೆದುಕೊಂಡ ಕುಸುಮಾ, ಇತ್ತ ಹೆಡ್‌ ಕುಕ್‌ ಭಾಗ್ಯಾಗೆ ಹೋಟೆಲ್‌ ಸಿಬ್ಬಂದಿಯಿಂದ ಸ್ವಾಗತ; ಭಾಗ್ಯಲಕ್ಷ್ಮೀ ಧಾರಾವಾಹಿ

2) Kalki Day 1 Collection: ಬಾಕ್ಸ್‌ ಆಫೀಸ್‌ನಲ್ಲಿ ಬಂಗಾರದ ಬೆಳೆ ತೆಗೆದ ಕಲ್ಕಿ 2898 ಎಡಿ; ಬಾಹುಬಲಿ, ಆರ್‌ಆರ್‌ಆರ್‌ ದಾಖಲೆ ಸರಿಗಟ್ಟಿತೇ? ಕಲ್ಕಿ ಸುದ್ದಿಗಳನ್ನು ಇಲ್ಲಿ ಓದಿ

3) ಕರುನಾಡಿಂದ ಕಾಸಷ್ಟೇ ಬೇಕು! ಈ ಒಂದು ವಿಷಯದಲ್ಲಿ ಕನ್ನಡಿಗರನ್ನು ಕೆರಳಿ ಕೆಂಡವಾಗಿಸಿದ ಪ್ರಭಾಸ್‌ ನಟನೆಯ ಕಲ್ಕಿ 2898 AD ಸಿನಿಮಾ

4) ಸೆಮಿಫೈನಲ್ ಹಂತದಲ್ಲಿ ಇದೇ ಮೊದಲ ಬಾರಿಗೆ ಒಂದಂಕಿಗೆ ವಿರಾಟ್ ಕೊಹ್ಲಿ ಔಟ್; ಸಮಾಧಾನಪಡಿಸಿದ ರಾಹುಲ್ ದ್ರಾವಿಡ್, ವಿಡಿಯೋ- ಇಲ್ಲಿ ಕ್ಲಿಕ್ ಮಾಡಿ

ಟಿ20 ವರ್ಲ್ಡ್‌ಕಪ್ 2024