ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಈ ಸಲ ಜುಲೈ 31ರೊಳಗೆ ಐಟಿಆರ್ ಸಲ್ಲಿಸದೇ ಇದ್ದರೆ ಏನಾಗುತ್ತೆ, ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಕರ್ತವ್ಯವಾದ ಕಾರಣ ಪರಿಣಾಮದ ವಿವರ ಹೀಗಿದೆ ನೋಡಿ

ಈ ಸಲ ಜುಲೈ 31ರೊಳಗೆ ಐಟಿಆರ್ ಸಲ್ಲಿಸದೇ ಇದ್ದರೆ ಏನಾಗುತ್ತೆ, ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಕರ್ತವ್ಯವಾದ ಕಾರಣ ಪರಿಣಾಮದ ವಿವರ ಹೀಗಿದೆ ನೋಡಿ

ITR 2024-25: ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಕರ್ತವ್ಯವಾದ ಕಾರಣ, ಈ ಸಲ ಜುಲೈ 31ರೊಳಗೆ ಐಟಿಆರ್ ಸಲ್ಲಿಸದೇ ಇದ್ದರೆ ಏನಾಗುತ್ತೆ ಎಂಬ ಪರಿಣಾಮದ ವಿವರ ಹೀಗಿದೆ ನೋಡಿ.

ಈ ಸಲ ಜುಲೈ 31ರೊಳಗೆ ಐಟಿಆರ್ ಸಲ್ಲಿಸದೇ ಇದ್ದರೆ ಏನಾಗುತ್ತೆ, ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಕರ್ತವ್ಯವಾದ ಕಾರಣ ಪರಿಣಾಮ ಭಿನ್ನವಾಗಿರಲಿದೆ. (ಸಾಂಕೇತಿಕ ಚಿತ್ರ)
ಈ ಸಲ ಜುಲೈ 31ರೊಳಗೆ ಐಟಿಆರ್ ಸಲ್ಲಿಸದೇ ಇದ್ದರೆ ಏನಾಗುತ್ತೆ, ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಕರ್ತವ್ಯವಾದ ಕಾರಣ ಪರಿಣಾಮ ಭಿನ್ನವಾಗಿರಲಿದೆ. (ಸಾಂಕೇತಿಕ ಚಿತ್ರ) (Canva)

ನವದೆಹಲಿ: ವೈಯಕ್ತಿಕ ತೆರಿಗೆದಾರರು ತಮ್ಮ ಕಳೆದ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್‌ (ಐಟಿಆರ್) ಅನ್ನು ಮೌಲ್ಯಮಾಪನ ವರ್ಷ 2024-25ರ ಜುಲೈ 31ರೊಳಗೆ ಸಲ್ಲಿಸಬೇಕು. ಈ ಗಡುವನ್ನು ತಪ್ಪಿಸಿಕೊಂಡರೆ ಈ ವರ್ಷದಿಂದ ತೆರಿಗೆದಾರರ ಹಣಕಾಸಿನ ಯೋಜನೆಗೆ ಕಾನೂನು ತೊಡಕುಗಳು ಉಂಟಾಗಲಿದೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಇನ್ನು ತೆರಿಗೆದಾರರ ನಿರ್ಣಾಯಕ ಕರ್ತವ್ಯವಾಗಿ ಪರಿಗಣಿಸಲ್ಪಡುತ್ತದೆ.

ಟ್ರೆಂಡಿಂಗ್​ ಸುದ್ದಿ

ಆದಾಗ್ಯೂ, ನಿಶ್ಚಿತ ಗಡುವಿನೊಳಗೆ ಐಟಿಆರ್ ಸಲ್ಲಿಸುವುದು ಸ್ವಲ್ಪ ಸವಾಲಿನ ವಿಚಾರವಾಗಬಹುದು. ಯಾಕೆಂದರೆ ನಿಗದಿತ ಸಮಯದೊಳಗೆ ಐಟಿಆರ್ ಸಲ್ಲಿಸದೇ ಇದ್ದರೆ ತೆರಿಗೆ ಅಧಿಕಾರಿಗಳ ಪರಿಶೀಲನೆ ಮತ್ತು ದಂಡಕ್ಕೆ ಕಾರಣವಾಗಲಿದೆ. ಆದ್ದರಿಂದ ಈ ಸಮಸ್ಯೆಗಳನ್ನು ತಪ್ಪಿಸಲು ಐಟಿಆರ್ ಫೈಲಿಂಗ್‌ ಗಡುವಿನ ಮಹತ್ವವನ್ನು ಅರ್ಥಮಾಡಿಕೊಳ್ಳುವುದು ಅಗತ್ಯ.

ಐಟಿಆರ್‌ 2024 ಸಲ್ಲಿಕೆಗೆ ಜುಲೈ 31 ಕೊನೇ ದಿನ

ಆದಾಯ ತೆರಿಗೆ ರಿಟರ್ನ್‌ ಫೈಲಿಂಗ್‌ ಮಾಡಲು ಜುಲೈ 31 ಕೊನೇ ದಿನ. ಆದಾಗ್ಯೂ ವಿವಿಧ ರೀತಿ ತೆರಿಗೆದಾರರಿಗೆ ಐಟಿಆರ್ ಸಲ್ಲಿಸುವ ಗಡುವು ಬೇರೆ ಬೇರೆ ದಿನಾಂಕಗಳಲ್ಲಿವೆ. ಈ ಗಡುವು ತಪ್ಪಿ ಹೋದರೆ, ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 234ರ ಪ್ರಕಾರ ದಂಡ ಪಾವತಿಸಬೇಕಾದೀತು.

ವಾಡಿಕೆಯಂತೆ ಗಮನಿಸುವುದಾದರೆ, ಕಳೆದ ಮೂರ್ನಾಲ್ಕು ವರ್ಷಗಳ ಅವಧಿಯಲ್ಲಿ ಐಟಿಆರ್ ಸಲ್ಲಿಕೆಯ ಅವಧಿಯನ್ನು ಸರ್ಕಾರ ವಿಸ್ತರಣೆ ಮಾಡಿತ್ತು ಎಂಬುದನ್ನುಇಲ್ಲಿ ಸ್ಮರಿಸಬಹುದು.

ಕಂಪನಿಗಳು ಮತ್ತೆ ತೆರಿಗೆ ಲೆಕ್ಕ ಪರಿಶೋಧಕರು ಅಕ್ಟೋಬರ್ 31ರ ಒಳಗೆ ಐಟಿಆರ್ ಫೈಲ್ ಮಾಡಬೇಕು. ಟ್ರಾನ್ಸ್‌ಫರ್ ಫೈಲಿಂಗ್ ಪ್ರಕರಣಗಳಲ್ಲಿ ತೆರಿಗೆದಾರರಿಗೆ ಐಟಿಆರ್ ಸಲ್ಲಿಕೆಗೆ ನವೆಂಬರ್ 30ರ ತನಕ ಕಾಲಾವಕಾಶವಿರುತ್ತದೆ.

ಐಟಿಆರ್ ಜುಲೈ 31ರೊಳಗೆ ಸಲ್ಲಿಸದೇ ಇದ್ದರೆ ವಿಧಿಸುವ ಶಿಕ್ಷೆ, ದಂಡ ಏನು

ನಿಗದಿತ ಜುಲೈ 31ರ ಒಳಗೆ ಐಟಿಆರ್ ಸಲ್ಲಿಸದೇ ಇದ್ದರೆ ವಿಧಿಸುವ ಶಿಕ್ಷೆ, ದಂಡ ಏನಿರಬಹುದು ಎಂಬ ಪ್ರಶ್ನೆ ಸಹಜ ಕುತೂಹಲದ್ದು. ಈ ರೀತಿ ನಿಗದಿತ ದಿನಾಂಕದ ನಂತರ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸುವುದು, ವಿಳಂಬ ಮತ್ತು ತೆರಿಗೆ ಹೊಣೆಗಾರಿಕೆಯ ಆಧಾರದ ಮೇಲೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 234A ಪ್ರಕಾರ ದಂಡ ಶುಲ್ಕ ಮತ್ತು ಬಡ್ಡಿ ಶುಲ್ಕ ಪಾವತಿಸಬೇಕಾಗಬಹುದು. ಹೆಚ್ಚುವರಿಯಾಗಿ, ಸೆಕ್ಷನ್‌ 234F ವಿಳಂಬ ಶುಲ್ಕವನ್ನು ವಿಧಿಸುತ್ತದೆ. ಇದು ತೆರಿಗೆದಾರರ ಒಟ್ಟು ಆದಾಯದ ಆಧಾರದ ಮೇಲೆ 1,000 ರೂಪಾಯಿಯಿಂದ 5,000 ರೂಪಾಯಿ ತನಕ ದಂಡ ಬೀಳುವಂತೆ ಮಾಡುತ್ತದೆ.

ಇದಲ್ಲದೆ, ಆದಾಯ ತೆರಿಗೆ ರಿಟರ್ನ್ (ITR) ಅನ್ನು ತಡವಾಗಿ ಸಲ್ಲಿಸುವುದರಿಂದ ನಿರ್ದಿಷ್ಟ ರೀತಿಯ ವ್ಯವಹಾರ ಮತ್ತು ಬಂಡವಾಳ ನಷ್ಟಗಳನ್ನು ಮುಂದಕ್ಕೆ ಸಾಗಿಸುವ ಅವಕಾಶವನ್ನು ನಿರ್ಬಂಧಿಸುತ್ತದೆ. ಮನೆ ಆಸ್ತಿಗೆ ಸಂಬಂಧಿಸಿದವು ಹೊರತುಪಡಿಸಿ, ರಿಟರ್ನ್ ಸಲ್ಲಿಸಿದ ನಂತರ ಭವಿಷ್ಯದ ಆದಾಯಕ್ಕೆ ವಿರುದ್ಧವಾಗಿ ಸಾಗಿಸಲು ಅಥವಾ ಸರಿದೂಗಿಸಲು ಸಾಧ್ಯವಿಲ್ಲ.

ಇದಲ್ಲದೆ, ಮೂಲ ಗಡುವಿನ ನಂತರ ರಿಟರ್ನ್ ಸಲ್ಲಿಸಿದರೆ ಕೆಲವು ಕಡಿತಗಳು ಮತ್ತು ವಿನಾಯಿತಿಗಳನ್ನು ಕ್ಲೈಮ್ ಮಾಡುವ ಅವಕಾಶವನ್ನು ಕಳೆದುಕೊಳ್ಳಬಹುದು. ತೆರಿಗೆ ವಿಧಿಸಬಹುದಾದ ಆದಾಯವನ್ನು ಕಡಿಮೆ ಮಾಡಲು ಮತ್ತು ತೆರಿಗೆ ಬಾಧ್ಯತೆಗಳನ್ನು ಉತ್ತಮಗೊಳಿಸಲು ಈ ಕಡಿತಗಳು ನಿರ್ಣಾಯಕವಾಗಿವೆ ಎಂದು ಪರಿಣತರು ಹೇಳುತ್ತಾರೆ.

ಇದೂ ಅಲ್ಲದೆ, ಈ ರೀತಿ ತಡವಾಗಿ ಸಲ್ಲಿಕೆಯಾಗುವ ಐಟಿಆರ್‌ಗಳನ್ನು ಅಧಿಕಾರಿಗಳು ಕಠಿಣ ಪರಿಶೀಲನೆಗೆ ಒಳಪಡಿಸುವ ಮತ್ತು ದಂಡ, ಬಡ್ಡಿ ವಿಧಿಸುವ ಅವಕಾಶಕ್ಕೆ ಕಾರಣವಾಗುತ್ತದೆ. ನೀವು ಯಾವುದೇ ತೆರಿಗೆಯನ್ನು ಪಾವತಿಸದಿದ್ದರೂ ಸಹ ಸಂಭಾವ್ಯ ಪೆನಾಲ್ಟಿಗಳು ಮತ್ತು ಬಡ್ಡಿ ಶುಲ್ಕಗಳನ್ನು ಕಡಿಮೆ ಮಾಡಲು ಐಟಿ ರಿಟರ್ನ್ ಸಕಾಲದಲ್ಲಿ ಸಲ್ಲಿಸುವುದು ಉತ್ತಮ.

ಟಿ20 ವರ್ಲ್ಡ್‌ಕಪ್ 2024