ಕನ್ನಡ ಸುದ್ದಿ  /  ಕ್ರೀಡೆ  /  ಇತಿಹಾಸ ನಿರ್ಮಿಸಿದ ಶ್ರೀಜಾ ಅಕುಲಾ; ವಿಶ್ವ ಟೇಬಲ್ ಟೆನಿಸ್ ಸಿಂಗಲ್ಸ್ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರ್ತಿ

ಇತಿಹಾಸ ನಿರ್ಮಿಸಿದ ಶ್ರೀಜಾ ಅಕುಲಾ; ವಿಶ್ವ ಟೇಬಲ್ ಟೆನಿಸ್ ಸಿಂಗಲ್ಸ್ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರ್ತಿ

Sreeja Akula: ನೈಜೀರಿಯಾದ ಲಾಗೋಸ್‌ನಲ್ಲಿ ನಡೆದ ವಿಶ್ವ ಟೇಬಲ್ ಟೆನಿಸ್ ಸಿಂಗಲ್ಸ್ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತದ ಶ್ರೀಜಾ ಅಕುಲಾ ಚೀನಾದ ಡಿಂಗ್ ಯಿಜಿ ವಿರುದ್ಧ ರೋಚಕ ಅಂತರದಿಂದ ಜಯ ಗಳಿಸಿದರು. ಇದರೊಂದಿಗೆ ನೂತನ ಇತಿಹಾಸ ನಿರ್ಮಿಸಿದರು.

ವಿಶ್ವ ಟೇಬಲ್ ಟೆನಿಸ್ ಸಿಂಗಲ್ಸ್ ಪ್ರಶಸ್ತಿ ಗೆದ್ದ  ಶ್ರೀಜಾ ಅಕುಲಾ
ವಿಶ್ವ ಟೇಬಲ್ ಟೆನಿಸ್ ಸಿಂಗಲ್ಸ್ ಪ್ರಶಸ್ತಿ ಗೆದ್ದ ಶ್ರೀಜಾ ಅಕುಲಾ (AP)

2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಸ್ಟಾರ್ ಟೇಬಲ್‌ ಟೆನಿಸ್ ಆಟಗಾರ್ತಿ ಶ್ರೀಜಾ ಅಕುಲಾ‌ (Sreeja Akula), ವಿಶ್ವ ಟೇಬಲ್ ಟೆನಿಸ್ (WTT) ಸಿಂಗಲ್ಸ್ ಪ್ರಶಸ್ತಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ನೈಜೀರಿಯಾದ ಲಾಗೋಸ್‌ನಲ್ಲಿ ನಡೆದ ರೋಚಕ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಶ್ರೀಜಾ ಅವರು ಚೀನಾದ ಪ್ರಬಲ ಎದುರಾಳಿ ಡಿಂಗ್ ಯಿಜಿ ವಿರುದ್ಧ 10-12, 11-9, 11-6, 11-8, 11-6ರ ಅಂಕಗಳಿಂದ ಜಯಭೇರಿ ಬಾರಿಸಿದರು. ಆ ಮೂಲಕ ಡಬ್ಲ್ಯುಟಿಟಿ ಸಿಂಗಲ್ಸ್ ಕಿರೀಟ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ಇತಿಹಾಸ ನಿರ್ಮಿಸಿದರು.

ಟ್ರೆಂಡಿಂಗ್​ ಸುದ್ದಿ

ಸೆಮಿಫೈನಲ್‌ ಪಂದ್ಯದಲ್ಲಿ, ಶ್ರೀಜಾ ಅವರು ಭಾರತದ ಎದುರಾಳಿ ಸುತೀರ್ಥ ಮುಖರ್ಜಿ ವಿರುದ್ಧ 3-2 ಅಂತರದಿಂದ ಗೆದ್ದು ಫೈನಲ್‌ಗೆ ಲಗ್ಗೆ ಹಾಕಿದರು. ಮತ್ತೊಂದು ಸೆಮಿಫೈನಲ್‌ನಲ್ಲಿ, ಭಾರತದ ಅಹಿಕಾ ಮುಖರ್ಜಿ 2-3 ಅಂತರದಿಂದ ಡಿಂಗ್ ಯಿಜಿ ವಿರುದ್ಧ ಸೋಲನುಭವಿಸಿದರು. ಆ ಮೂಲಕ ಶ್ರೀಜಾ ಮತ್ತು ಡಿಂಗ್ ನಡುವಿನ ಐತಿಹಾಸಿಕ ಫೈನಲ್‌ ಪಂದ್ಯಕ್ಕೆ ಮುನ್ನುಡಿ ಸಿಕ್ಕಿತು.

ಇದಕ್ಕೂ ಮುನ್ನ ನಡೆದ ಮಹಿಳಾ ಡಬಲ್ಸ್ ಫೈನಲ್‌ನಲ್ಲಿ ಅಕುಲಾ ಮತ್ತು ಅರ್ಚನಾ ಗಿರೀಶ್ ಕಾಮತ್ 3-0 ಅಂತರದಲ್ಲಿ ಯಶಸ್ವಿನಿ ಘೋರ್ಪಡೆ ಮತ್ತು ದಿಯಾ ಪರಾಗ್ ಚಿಟಾಲೆ ಅವರನ್ನು ಸೋಲಿಸಿದರು. ಯಶಸ್ವಿನಿ ಮತ್ತು ದಿಯಾ ಜೋಡಿ 11-9, 11-6, 12-10 ನೇರ ಸೆಟ್ ಗಳಿಂದ ಜಯಗಳಿಸಿತು.

ಸೆಮಿಫೈನಲ್ ನಲ್ಲಿ ಶ್ರೀಜಾ ಮತ್ತು ಅರ್ಚನಾ 3–0 (11–5, 11–7, 12–10) ಸೆಟ್ ಗಳಿಂದ ಐಹಿಕಾ ಮತ್ತು ಸುತೀರ್ಥ ಮುಖರ್ಜಿ ಅವರನ್ನು ಸೋಲಿಸಿದ್ದರು.

ಆರ್ಚರಿ ವಿಶ್ವಕಪ್‌ನಲ್ಲಿ (Archery World Cup) ಭಾರತ ವನಿತೆಯರ ತಂಡವು ಹ್ಯಾಟ್ರಿಕ್‌ ಚಿನ್ನ ಗೆದ್ದಿದೆ. ಮಹಿಳಾ ಕಾಂಪೌಂಡ್ ಆರ್ಚರಿ ತಂಡವು ವಿಶ್ವಕಪ್‌ ಚಿನ್ನದೊಂದಿಗೆ ಮುಂದೆ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿಯೂ ಬಂಗಾರದ ಪದಕ ಗೆಲ್ಲುವ ಕನಸು ಕಾಣುತ್ತಿದೆ. ಭಾರತದ ಕಾಂಪೌಂಡ್ ವನಿತೆಯರ ಬಿಲ್ಲುಗಾರಿಕೆ ತಂಡವು ಜೂನ್‌ 22ರ ಶನಿವಾರ ನಡೆದ ವಿಶ್ವಕಪ್ ಸ್ಪರ್ಧೆಯ ಮೂರನೇ ಲೆಗ್‌ನಲ್ಲಿ ಎಸ್ಟೋನಿಯಾ ತಂಡವನ್ನು ಸೋಲಿಸುವ ಮೂಲಕ ಹ್ಯಾಟ್ರಿಕ್ ಚಿನ್ನದ ಪದಕ ಗೆದ್ದಿದ್ದಾರೆ.