ಕನ್ನಡ ಸುದ್ದಿ  /  ಜೀವನಶೈಲಿ  /  ಆರೋಗ್ಯಕ್ಕೆ ಒಳ್ಳೇದು ಅಂತ ಅತಿಯಾಗಿ ಅರಿಸಿನ ಬಳಸಿದ್ರೆ ವಿಷವಾಗಬಹುದು ಎಚ್ಚರ, ಇದರ ಅಡ್ಡ ಪರಿಣಾಮಗಳಿವು

ಆರೋಗ್ಯಕ್ಕೆ ಒಳ್ಳೇದು ಅಂತ ಅತಿಯಾಗಿ ಅರಿಸಿನ ಬಳಸಿದ್ರೆ ವಿಷವಾಗಬಹುದು ಎಚ್ಚರ, ಇದರ ಅಡ್ಡ ಪರಿಣಾಮಗಳಿವು

ಅರಶಿನದಲ್ಲಿ ಹಲವಾರು ಔಷಧೀಯ ಗುಣಗಳಿವೆ ಅಂತ ಕೆಲವು ಸಂಶೋಧನಾ ವರದಿಗಳಿಂದ ಸಾಬೀತಾಗಿದೆ. ಭಾರತೀಯರು ಅಡುಗೆಯಲ್ಲಿ ಅರಶಿನವನ್ನು ಹೆಚ್ಚಾಗಿ ಬಳಸುತ್ತಾರೆ. ಮಾಂಸಾಹಾರಕ್ಕಂತೂ ಅರಿಶಿನ ಇಲ್ಲದಿದ್ದರೆ, ಅಡುಗೆಯೇ ಪೂರ್ಣವಾಗುವುದಿಲ್ಲ. ಹಲವಾರು ರೋಗಗಳಿಗೆ ರಾಮಬಾಣವಾಗಿರುವ ಈ ಸಾಂಬಾರಾ ಪದಾರ್ಥವನ್ನು ಅತಿಯಾಗಿ ಸೇವಿಸಿದರೆ ವಿಷವಾಗಿ ಬದಲಾದೀತು ಜೋಕೆ. (ಬರಹ: ಪ್ರಿಯಾಂಕ ಗೌಡ)

ಆರೋಗ್ಯಕ್ಕೆ ಒಳ್ಳೇದು ಅಂತ ಅತಿಯಾಗಿ ಅರಿಸಿನ ಬಳಸಿದ್ರೆ ವಿಷವಾಗಬಹುದು ಎಚ್ಚರ
ಆರೋಗ್ಯಕ್ಕೆ ಒಳ್ಳೇದು ಅಂತ ಅತಿಯಾಗಿ ಅರಿಸಿನ ಬಳಸಿದ್ರೆ ವಿಷವಾಗಬಹುದು ಎಚ್ಚರ

ಸಾಂಬಾರ ಬೆಳೆಗಳಲ್ಲಿ ಅರಶಿನವೂ ಒಂದು. ಇದು ಶುಂಠಿ ಕುಟುಂಬ ಝೆಂಜಿಬರೇಸಿ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ಭಾರತೀಯ ಉಪಖಂಡ ಮತ್ತು ಆಗ್ನೇಯ ಏಷ್ಯಾಕ್ಕೆ ಸ್ಥಳೀಯವಾಗಿರುವ ಅರಶಿನವು ದೀರ್ಘಕಾಲಿಕ, ಬೇರುಕಾಂಡ, ಮೂಲಿಕೆಯ ಸಸ್ಯವಾಗಿದೆ. ಇದನ್ನು ಸಾಂಬಾರುಗಳಿಗೆ ಮುಖ್ಯವಾಗಿ ಮಾಂಸಾಹಾರಿ ಭಕ್ಷ್ಯಗಳಿಗೆ ಅರಶಿನ ಬೇಕೇ ಬೇಕು. ಮದುವೆಯ ಹಿಂದಿನ ದಿನ ಅರಶಿನ ಶಾಸ್ತ್ರಕ್ಕೂ ಇದು ಬಹಳ ಮುಖ್ಯವಾಗಿದೆ. ಮುತ್ತೈದೆಯರ ಅರಶಿನ-ಕುಂಕುಮ ಭಾಗ್ಯಕ್ಕೂ ಅರಶಿನ ಬೇಕೇ ಬೇಕು. ಹೀಗೆ ದೈನಂದಿನ ನಮ್ಮ ಜೀವನದಲ್ಲಿ ಅರಶಿನ ಇರಲೇಬೇಕು.

ಟ್ರೆಂಡಿಂಗ್​ ಸುದ್ದಿ

ಸಾವಿರಾರು ವರ್ಷಗಳಿಂದ ಪ್ರಾಚೀನ ಭಾರತೀಯ ಮಸಾಲೆಯು ಆಯುರ್ವೇದದಿಂದ ನಂಬಲ್ಪಟ್ಟಿದೆ. ನಾವು ಬಳಸುವ ಸಾಂಬಾರ ಪದಾರ್ಥಗಳು ಔಷಧೀಯ ಗುಣವುಳ್ಳವುಗಳಾಗಿವೆ. ಅರಶಿನ ಕೂಡ ಬಹಳ ಪ್ರಯೋಜನಕಾರಿಯಾಗಿದೆ. ಇದು ಉರಿಯೂತ ಮತ್ತು ಸೋಂಕುಗಳನ್ನು ತಡೆಗಟ್ಟುವುದು, ಕ್ಯಾನ್ಸರ್, ಜೀರ್ಣಕಾರಿ ಸಮಸ್ಯೆಗಳನ್ನು ಸರಾಗಗೊಳಿಸುವುದು, ನೋವುಗಳನ್ನು ನಿವಾರಿಸಲು, ಚರ್ಮದ ಸಮಸ್ಯೆಗಳನ್ನು ನಿವಾರಿಸುವ ಮೂಲಕ ಹಲವು ಅದ್ಭುತಗಳನ್ನು ಇದು ಒಳಗೊಂಡಿದೆ. ಅತಿಯಾದರೆ ಅಮೃತವೂ ವಿಷ ಎಂಬ ಮಾತಿನಂತೆ ಇದನ್ನು ಅತಿಯಾಗಿ ಸೇವಿಸುವುದು ಒಳ್ಳೆಯದಲ್ಲ. ಅತಿಯಾಗಿ ಸೇವಿಸಿದರೆ ವಿಷಕಾರಿಯಾಗಿ ಬದಲಾಗುವ ಸಾಧ್ಯತೆಯಿದೆ. ಕಚ್ಚಾ ಅರಿಶಿನವು ಅಂಥಾ ತೊಂದರೆಯುಂಟು ಮಾಡುವುದಿಲ್ಲ. ಶುದ್ಧೀಕರಿಸಿದ ಕರ್ಕ್ಯುಮಿನ್ ಮತ್ತು ಇತರ ಆಲ್ಕಲಾಯ್ಡ್‌ಗಳನ್ನು ಒಳಗೊಂಡಿರುವ ಅರಿಶಿನವನ್ನು ಎಚ್ಚರಿಕೆಯಿಂದ ಬಳಸಬೇಕು.

ಅರಶಿನದ ಪ್ರಯೋಜನಗಳೇನು?

ಅರಿಶಿನವು ರಕ್ತವನ್ನು ಶುದ್ಧೀಕರಿಸುವ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉರಿಯೂತದ ಗುಣಲಕ್ಷಣಗಳನ್ನು ಗುಣಪಡಿಸುವಲ್ಲಿ ಪ್ರಯೋಜನಕಾರಿಯಾಗಿದೆ. ಅರಿಶಿನವನ್ನು ನಿಯಮಿತವಾಗಿ ಸೇವಿಸುವುದರಿಂದ ಸ್ಥೂಲಕಾಯತೆಯನ್ನು ತಡೆಯಬಹುದು. ಅದರಲ್ಲಿರುವ ಶಕ್ತಿಯುತ ಸಂಯುಕ್ತ, ಉರಿಯೂತವನ್ನು ನಿಯಂತ್ರಿಸಬಹುದು. ಇದು ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಮತ್ತು ಇನ್ಸುಲಿನ್ ಸಂವೇದನೆಯನ್ನು ಸುಧಾರಿಸುವ ಮೂಲಕ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

ಅರಿಶಿನವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಮುಖ್ಯ. ಬೇಸಿಗೆ ತಿಂಗಳುಗಳಲ್ಲಿ ಕರ್ಕ್ಯುಮಿನ್ ಪ್ರಮಾಣವನ್ನು ಕಡಿಮೆ ಮಾಡಬೇಕು. ಕಠಿಣವಾದ ಬಿಸಿಲು ಇರುವ ಪ್ರದೇಶಗಳಲ್ಲಿ ವಾಸಿಸುವ ಜನರು ಯಾವಾಗಲೂ ಬೇಸಿಗೆಯಲ್ಲಿ ಎಚ್ಚರಿಕೆಯಿಂದ ಬಳಸಬೇಕು. ಸಾಮಾನ್ಯವಾಗಿ ಪಿತ್ತ ಸಮಸ್ಯೆಯನ್ನು ಹೊಂದಿರುವವರು ಇದನ್ನು ಹೆಚ್ಚು ಬಳಸಬಾರದು.

ತೂಕ ನಷ್ಟಕ್ಕೆ ಸಹಕಾರಿ, ಆದರೆ…

ತೂಕ ಕಳೆದುಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಅರಶಿನವು ಬಹಳ ಪ್ರಯೋಜನಕಾರಿಯಾಗಿದೆ. ಆದರೆ, ಈಗಾಗಲೇ ಕಡಿಮೆ ತೂಕವಿರುವವರು, ತೀವ್ರವಾದ ದೇಹದ ಶುಷ್ಕತೆ, ಮಲಬದ್ಧತೆ, ಒಣ ಮತ್ತು ಒರಟು ಚರ್ಮವನ್ನು ಹೊಂದಿರುವವರು ಇದನ್ನು ಹೆಚ್ಚು ಸೇವಿಸಬಾರದು.

ಅರಿಶಿನವನ್ನು ತುಪ್ಪ ಮತ್ತು ಹಾಲಿನೊಂದಿಗೆ ಏಕೆ ಸೇರಿಸಬೇಕು?

ತುಪ್ಪ ಮತ್ತು ಅರಿಶಿನ ಹಾಲು ನೈಸರ್ಗಿಕವಾಗಿ ನಿಮ್ಮ ಚರ್ಮದ ತೇವಾಂಶವನ್ನು ಸುಧಾರಿಸುತ್ತದೆ. ಇದನ್ನು ನಿಯಮಿತವಾಗಿ ಕುಡಿಯುವುದರಿಂದ ನಿಮ್ಮ ತ್ವಚೆಗೆ ಸುಂದರವಾದ ಹೊಳಪನ್ನು ನೀಡುತ್ತದೆ. ಅಲ್ಲದೆ, ಇದು ಮುಖದ ಮೇಲಿನ ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರಸಕ್ತ ಋತುವಿನಲ್ಲಿ ಸಾಮಾನ್ಯ ಸಮಸ್ಯೆ ಎಂದರೆ ನೆಗಡಿ, ಕೆಮ್ಮು, ಅಲರ್ಜಿ ಮತ್ತು ಜ್ವರ. ಹೀಗಾಗಿ ಹಾಲಿನೊಂದಿಗೆ ಅರಶಿನವನ್ನು ಬೆರೆಸಿ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಮಧುಮೇಹಿಗಳು ಅರಿಶಿನ ಸೇವಿಸಬಹುದೇ?

ಅರಿಶಿನದಲ್ಲಿನ ಸಕ್ರಿಯ ಘಟಕಾಂಶವಾದ ಕರ್ಕ್ಯುಮಿನ್ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಮತ್ತು ಮಧುಮೇಹದಿಂದ ಉಂಟಾಗುವ ಉರಿಯೂತದ ಪ್ರಕ್ರಿಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ, ನಿಮ್ಮ ಆಹಾರಕ್ಕೆ ಇದನ್ನು ಸೇರಿಸುವ ಮೊದಲು ತಜ್ಞ ವೈದ್ಯರ ಸಲಹೆ ಪಡೆಯುವುದು ಉತ್ತಮ.

ವಿಭಾಗ