ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Lok Sabha Speaker: ಲೋಕಸಭೆ ಸ್ಪೀಕರ್‌ ಸ್ಥಾನಕ್ಕೆ ಇಬ್ಬರ ನಾಮಪತ್ರ, ಮತದಾನ ಖಚಿತ, ಇತಿಹಾಸದಲ್ಲೇ ಮೊದಲ ಬಾರಿ ಚುನಾವಣೆ

Lok Sabha Speaker: ಲೋಕಸಭೆ ಸ್ಪೀಕರ್‌ ಸ್ಥಾನಕ್ಕೆ ಇಬ್ಬರ ನಾಮಪತ್ರ, ಮತದಾನ ಖಚಿತ, ಇತಿಹಾಸದಲ್ಲೇ ಮೊದಲ ಬಾರಿ ಚುನಾವಣೆ

Indian Politics ಭಾರತದ ಲೋಕಸಭೆಯ ಸ್ಪೀಕರ್‌ ಹುದ್ದೆಗೆ ಮೊದಲ ಬಾರಿಗೆ ಬುಧವಾರ ಮತದಾನ ನಡೆಯುವುದು ನಿಶ್ಚಯವಾಗಿದೆ.

ಲೋಕಸಭೆ ಸ್ಪೀಕರ್‌ ಹುದ್ದೆಗೆ ಮತದಾನ ನಡೆಯುವುದು ಖಚಿತವಾಗಿದೆ
ಲೋಕಸಭೆ ಸ್ಪೀಕರ್‌ ಹುದ್ದೆಗೆ ಮತದಾನ ನಡೆಯುವುದು ಖಚಿತವಾಗಿದೆ

ದೆಹಲಿ: ಆಡಳಿತಾರೂಢ ಎನ್ಡಿಎ ಮತ್ತು ಪ್ರತಿಪಕ್ಷಗಳ ಭಾರತ ಬಣದ ನಡುವಿನ ಮಾತುಕತೆ ವಿಫಲವಾದ ನಂತರ ಬಿಜೆಪಿ ಸಂಸದ ಹಾಗೂ ಮಾಜಿ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಮತ್ತು ಕಾಂಗ್ರೆಸ್ ಹಿರಿಯ ಸಂಸದ ಕೋಡಿಕುನ್ನಿಲ್ ಸುರೇಶ್ ಇಂಡಿಯಾ ಬ್ಲಾಕ್‌ ಅಭ್ಯ್ಥಿಯಾಗಿ ಮಂಗಳವಾರ ಲೋಕಸಭಾ ಸ್ಪೀಕರ್ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಇದೇ ಮೊದಲ ಬಾರಿಗೆ ಲೋಕಸಭೆಯಲ್ಲಿ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಏಳು ದಶಕದಲ್ಲಿ ಮೊದಲ ಬಾರಿಗೆ ಚುನಾವಣೆ ಸ್ಪೀಕರ್‌ ಸ್ಥಾನಕ್ಕೆ ನಡೆಯುತ್ತಿದೆ. ಈ ಹಿಂದೆ ಅವಿರೋಧವ���ಗಿಯೇ ಸ್ಪೀಕರ್‌ ಅವರನ್ನು ಆಯ್ಕೆ ಮಾಡುವ ಸಂಪ್ರದಾಯವಿತ್ತು. ಮೊದಲ ಬಾರಿಗೆ ಮುರಿದು ಬಿದ್ದಿದೆ. ಬುಧವಾರ ಲೋಕಸಭೆ ಸ್ಪೀಕರ್‌ ಸ್ಥಾನಕ್ಕೆ ಮತದಾನ ನಡೆಯಲಿದೆ.

ಟ್ರೆಂಡಿಂಗ್​ ಸುದ್ದಿ

ಈ ಬಾರಿ ಬಿಜೆಪಿ ಬಹುಮತವಿಲ್ಲದೇ ಮಿತ್ರ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿದೆ. ಎರಡು ಚುನಾವಣೆಗಳಲ್ಲಿ ಸೋತು ಸುಣ್ಣವಾಗಿದ್ದ ಕಾಂಗ್ರೆಸ್‌ ಈ ಚುನಾವಣೆಯಲ್ಲಿ ಚೇತರಿಕೆ ಕಂಡಿದೆ. ಪ್ರತಿಪಕ್ಷಗಳ ದನಿಗೂ ಬಲ ಸಿಕ್ಕಿದೆ. ಇದರ ನಡುವೆ ಲೋಕಸಭೆ ಸ್ಪೀಕರ್‌ ಹುದ್ದೆಯ ಪ್ರಕ್ರಿಯೆ ಮಂಗಳವಾರ ಆರಂಭಗೊಂಡಿದೆ.

ಬಿಜೆಪಿಯವರೇ ಸ್ಪೀಕರ್‌ ಸ್ಥಾನ ಪಡೆಯಲಿ.ಉಪ ಸಭಾಪತಿ ನಮಗೆ ಬಿಟ್ಟುಕೊಡಿ ಎಂದು ಕಾಂಗ್ರೆಸ್‌ ಸಹಿತ ಪ್ರತಿಪಕ್ಷಗಳು ಬೇಡಿಕೆ ಇಟ್ಟಿದ್ದರು. ಇದಕ್ಕೆ ಸಹಮತ ಬಾರದ ಹಿನ್ನೆಲೆಯಲ್ಲಿ ಚುನಾವಣೆಗೆ ನಿರ್ಧರಿಸಲಾಯಿತು. ಉಪ ಸ್ಪೀಕರ್ ಹುದ್ದೆ ಬಿಜೆಪಿಯೇತರ ಬಣದ ಸದಸ್ಯರಾಗಿರಬೇಕು ಎಂಬ ಷರತ್ತಿನ ಮೇಲೆ ಸರ್ಕಾರ ಬೆಂಬಲಿತ ಅಭ್ಯರ್ಥಿ ಓಂ ಬಿರ್ಲಾ ಅವರನ್ನು ಬೆಂಬಲಿಸಲು ಪ್ರತಿಪಕ್ಷಗಳು ಒಪ್ಪಿಕೊಂಡಿದ್ದವು. ಆದಾಗ್ಯೂ, ಎರಡೂ ಕಡೆಯವರು ಒಪ್ಪಂದಕ್ಕೆ ಬರಲು ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್‌ ನಾಯಕ ವೇಣುಗೋಪಾಲ್‌ ಹೇಳಿದರು.

ಇದಕ್ಕೂ ಮುನ್ನ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ರಾಜನಾಥ್ ಸಿಂಗ್ ಅವರು ಪ್ರತಿಪಕ್ಷಗಳನ್ನು ಸಂಪರ್ಕಿಸಿದ್ದರು. ಆದರೆ, ನಾಮಪತ್ರ ಸಲ್ಲಿಕೆಗೆ ಕೆಲವೇ ನಿಮಿಷಗಳು ಬಾಕಿ ಇರುವಾಗ ಕಾಂಗ್ರೆಸ್ ನ ಕೆ.ಸಿ.ವೇಣುಗೋಪಾಲ್, ಡಿಎಂಕೆಯ ಟಿ.ಆರ್.ಬಾಲು ಅವರು ರಾಜನಾಥ್ ಸಿಂಗ್ ಅವರ ಕಚೇರಿಯಿಂದ ಹೊರನಡೆದು ಎನ್ ಡಿಎ ಅಭ್ಯರ್ಥಿಯನ್ನು ಅನುಮೋದಿಸಲು ನಿರಾಕರಿಸಿದರು.

ನಂತರ ಮಾತನಾಡಿದ ಕೆ.ಸಿ.ವೇಣುಗೋಪಾಲ್, ಉಪಸಭಾಪತಿ ಸ್ಥಾನವನ್ನು ಪ್ರತಿಪಕ್ಷಗಳಿಗೆ ನೀಡುವ ಬಗ್ಗೆ ಸರ್ಕಾರ ಬದ್ಧವಾಗಿಲ್ಲ. ಕೆ ಸುರೇಶ್ ಅವರು ಸಂಸತ್ತಿನ ಅತ್ಯಂತ ಹಿರಿಯ ಸದಸ್ಯರಾಗಿದ್ದಾರೆ. ಈ ತಿಂಗಳ ಆರಂಭದಲ್ಲಿ ಅವರು ಎಂಟನೇ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರು ಕೇರಳದ ದಲಿತ ನಾಯಕ. ಅವರು ಉಪಸಭಾಧ್ಯಕ್ಷರಾಗಬೇಕೆಂದು ಪ್ರತಿಪಕ್ಷಗಳು ಬಯಸಿದ್ದವು. ಪ್ರತಿಪಕ್ಷಗಳಿಗೆ ಉಪರಾಷ್ಟ್ರಪತಿ ಸ್ಥಾನ ನೀಡಿದರೆ ಎನ್ಡಿಎ ಅಭ್ಯರ್ಥಿ ಆಯ್ಕೆಯನ್ನು ಇಂಡಿಯಾ ಬೆಂಬಲಿಸುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಹಿಂದೆ ಹೇಳಿದ್ದರು. ಆದರೆ ಅದರಂತೆ ಬಿಜೆಪಿ ನಡೆದುಕೊಳ್ಳದೇ ಇದ್ದುದರಿಂದ ನಾವು ಪ್ರತ್ಯೇಕವಾಗಿ ಸ್ಪರ್ಧಿಸಿದ್ದೇವೆ ಎಂದು ಹೇಳಿದರು.

ಮಾತುಕತೆ ಮುರಿದು ಬಿದ್ದ ನಂತರ ಓಂ ಬಿರ್ಲಾ ಅವರು ಎನ್‌ಡಿಎ ದಿಂದ ಹಾಗೂ ಕೋಡಿಕುನ್ನಿಲ್‌ ಸುರೇಶ್‌ ಇಂಡಿಯಾ ಕೂಟದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಲೋಕಸಭೆಯ ಕಾರ್ಯದರ್ಶಿ ಅವರು ಚುನಾವಣಾಧಿಕಾರಿಯಾಗಿದ್ದು, ಅವರು ಆಯ್ಕೆ ಪ್ರಕ್ರಿಯೆ ನಡೆಸುವರು.

ಇದರೊಂದಿಗೆ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದ ಅವಿರೋಧ ಆಯ್ಕೆಯ ಸಂಪ್ರದಾಯ ಮುರಿದು ಬಿದ್ದಿತು. ಬುಧವಾರ ಲೋಕಸಭೆಯ ಸ್ಪೀಕರ್‌ ಹಾಗೂ ಉಪಸಭಾಪತಿ ಹುದ್ದೆಗಳಿಗೆ ಮತದಾನ ನಡೆಯಲಿದೆ. ಎರಡೂ ಸ್ಥಾನಗಳೂ ಎನ್‌ಡಿಎ ಪಾಲಾಗುವ ನಿರೀಕ್ಷೆಯಿದೆ. ಬಿಜೆಪಿ ಸ್ಪೀಕರ್‌ ಹುದ್ದೆ ಉಳಿಸಿಕೊಂಡಿದ್ದು, ಜೆಡಿಯು ಅಥವಾ ಡಿಟಿಪಿಯವರಿಗೆ ಉಪಸಭಾಪತಿ ಹುದ್ದೆ ಸಿಗುವ ಸಾಧ್ಯತೆ ದಟ್ಟವಾಗಿದೆ.

ಟಿ20 ವರ್ಲ್ಡ್‌ಕಪ್ 2024