ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟೀಮ್ ಇಂಡಿಯಾ ವಿಜಯೋತ್ಸವ ಪರೇಡ್: ಮುಂಬೈನಲ್ಲಿ ಅಭಿಮಾನಿಗಳ ಸಮುದ್ರದಲ್ಲಿ 11 ಮಂದಿಗೆ ಗಾಯ, ಆಸ್ಪ್ರತೆಗೆ ದಾಖಲು

ಟೀಮ್ ಇಂಡಿಯಾ ವಿಜಯೋತ್ಸವ ಪರೇಡ್: ಮುಂಬೈನಲ್ಲಿ ಅಭಿಮಾನಿಗಳ ಸಮುದ್ರದಲ್ಲಿ 11 ಮಂದಿಗೆ ಗಾಯ, ಆಸ್ಪ್ರತೆಗೆ ದಾಖಲು

  • Team India’s Victory Parade: ಟೀಮ್ ಇಂಡಿಯಾ ಟಿ20 ವಿಜಯೋತ್ಸವದ ಮೆರವಣಿಗೆಯಲ್ಲಿ ಮರೀನ್ ಡ್ರೈವ್​​ ಮತ್ತು ದಕ್ಷಿಣ ಮುಂಬೈನ ಇತರ ಭಾಗಗಳಲ್ಲಿ ಜನದಟ್ಟಣೆಯಿಂದಾಗಿ ಕನಿಷ್ಠ 11 ಮಂದಿ ಅಭಿಮಾನಿಗಳು ಗಾಯಗೊಂಡಿದ್ದಾರೆ.

ಮುಂಬೈನಲ್ಲಿ ನಡೆದ ಟಿ-20 ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡಕ್ಕೆ ವಿಜಯೋತ್ಸವದ ಪರೇಡ್‌ನ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿದ ನಂತರ ಕನಿಷ್ಠ 11 ಮಂದಿ ಅಭಿಮಾನಿಗಳು ಗಾಯಗೊಂಡಿದ್ದಾರೆ. 
icon

(1 / 9)

ಮುಂಬೈನಲ್ಲಿ ನಡೆದ ಟಿ-20 ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡಕ್ಕೆ ವಿಜಯೋತ್ಸವದ ಪರೇಡ್‌ನ ಮಾರ್ಗದಲ್ಲಿ ಹೆಚ್ಚಿನ ಸಂ���್ಯೆಯ ಜನರು ಜಮಾಯಿಸಿದ ನಂತರ ಕನಿಷ್ಠ 11 ಮಂದಿ ಅಭಿಮಾನಿಗಳು ಗಾಯಗೊಂಡಿದ್ದಾರೆ. 

ಗಾಯಗೊಂಡ ಅಭಿಮಾನಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಕೆಲವರು ತಲೆತಿರುಗಿ ಬಿದ್ದವರು. ಈ ಪೈಕಿ 9 ಮಂದಿಯನ್ನು ಸರ್ಕಾರಿ ಜಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.
icon

(2 / 9)

ಗಾಯಗೊಂಡ ಅಭಿಮಾನಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಕೆಲವರು ತಲೆತಿರುಗಿ ಬಿದ್ದವರು. ಈ ಪೈಕಿ 9 ಮಂದಿಯನ್ನು ಸರ್ಕಾರಿ ಜಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.(PTI)

ವಿಪರೀತ ಜನಸಂದಣಿಯಿಂದ ಗಾಯಗಳ ಜೊತೆಗೆ ಉಸಿರಾಟದ ತೊಂದರೆಯನ್ನೂ ಅನುಭವಿಸಿದ್ದಾರೆ. ದಾಖಲಾದ ಎಲ್ಲಾ ವ್ಯಕ್ತಿಗಳು ಈಗ ಸ್ಥಿರ ಸ್ಥಿತಿಯಲ್ಲಿದ್ದಾರೆ ಎಂದು ಜೆಜೆ ಗ್ರೂಪ್ ಆಫ್ ಆಸ್ಪತ್ರೆಗಳ ಡೀನ್ ದೃಢಪಡಿಸಿದ್ದಾರೆ.
icon

(3 / 9)

ವಿಪರೀತ ಜನಸಂದಣಿಯಿಂದ ಗಾಯಗಳ ಜೊತೆಗೆ ಉಸಿರಾಟದ ತೊಂದರೆಯನ್ನೂ ಅನುಭವಿಸಿದ್ದಾರೆ. ದಾಖಲಾದ ಎಲ್ಲಾ ವ್ಯಕ್ತಿಗಳು ಈಗ ಸ್ಥಿರ ಸ್ಥಿತಿಯಲ್ಲಿದ್ದಾರೆ ಎಂದು ಜೆಜೆ ಗ್ರೂಪ್ ಆಫ್ ಆಸ್ಪತ್ರೆಗಳ ಡೀನ್ ದೃಢಪಡಿಸಿದ್ದಾರೆ.(AFP)

ಒಬ್ಬ ಅಭಿಮಾನಿಯನ್ನು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಬಳಿಯ ಸರ್ಕಾರಿ ಸೇಂಟ್ ಜಾರ್ಜ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಾಥಮಿಕ ಆರೈಕೆಯ ನಂತರ ಹೋಗಲು ಅನುಮತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
icon

(4 / 9)

ಒಬ್ಬ ಅಭಿಮಾನಿಯನ್ನು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಬಳಿಯ ಸರ್ಕಾರಿ ಸೇಂಟ್ ಜಾರ್ಜ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಾಥಮಿಕ ಆರೈಕೆಯ ನಂತರ ಹೋಗಲು ಅನುಮತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(PTI)

ಮತ್ತೊಬ್ಬ ವ್ಯಕ್ತಿಯನ್ನು ದಕ್ಷಿಣ ಮುಂಬೈನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನಂತರ ಡಿಸ್ಚಾರ್ಜ್ ಮಾಡಲಾಗಿದೆ.
icon

(5 / 9)

ಮತ್ತೊಬ್ಬ ವ್ಯಕ್ತಿಯನ್ನು ದಕ್ಷಿಣ ಮುಂಬೈನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನಂತರ ಡಿಸ್ಚಾರ್ಜ್ ಮಾಡಲಾಗಿದೆ.(PTI)

ಜುಲೈ 4ರ ಗುರುವಾರ ಸಂಜೆ ಭಾರತ ಕ್ರಿಕೆಟ್ ತಂಡದ ವಿಜಯೋತ್ಸವದ ಮೆರವಣಿಗೆ ವೀಕ್ಷಿಸಲು ಲಕ್ಷಾಂತರ ಅಭಿಮಾನಿಗಳು ಮರೀನ್ ಡ್ರೈವ್‌ಗೆ ಆಗಮಿಸಿದ್ದರು.
icon

(6 / 9)

ಜುಲೈ 4ರ ಗುರುವಾರ ಸಂಜೆ ಭಾರತ ಕ್ರಿಕೆಟ್ ತಂಡದ ವಿಜಯೋತ್ಸವದ ಮೆರವಣಿಗೆ ವೀಕ್ಷಿಸಲು ಲಕ್ಷಾಂತರ ಅಭಿಮಾನಿಗಳು ಮರೀನ್ ಡ್ರೈವ್‌ಗೆ ಆಗಮಿಸಿದ್ದರು.(AFP)

ಭಾರತೀಯ ಕ್ರಿಕೆಟ್​ ತಂಡದ ವಿಜಯೋತ್ಸವ ಕಾರಣ ದೊಡ್ಡ ಮಟ್ಟದ ಭದ್ರತೆ ಒದಗಿಸಲಾಗಿತ್ತು. ಅಹಿತಕರ ಘಟನೆ ನಡೆಯದಂತೆ ತಪ್ಪಿಸಲು ಮರೀನ್ ಡ್ರೈವ್ ಮತ್ತು ವಾಂಖೆಡೆ ಸ್ಟೇಡಿಯಂ ನಡುವೆ ವಿಸ್ತಾರವಾದ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.
icon

(7 / 9)

ಭಾರತೀಯ ಕ್ರಿಕೆಟ್​ ತಂಡದ ವಿಜಯೋತ್ಸವ ಕಾರಣ ದೊಡ್ಡ ಮಟ್ಟದ ಭದ್ರತೆ ಒದಗಿಸಲಾಗಿತ್ತು. ಅಹಿತಕರ ಘಟನೆ ನಡೆಯದಂತೆ ತಪ್ಪಿಸಲು ಮರೀನ್ ಡ್ರೈವ್ ಮತ್ತು ವಾಂಖೆಡೆ ಸ್ಟೇಡಿಯಂ ನಡುವೆ ವಿಸ್ತಾರವಾದ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.(REUTERS)

ವಿಜಯೋತ್ಸವದ ಮೆರವಣಿಗೆಯಲ್ಲಿ ಪ್ರೇಕ್ಷಕರನ್ನು ಸಮರ್ಥವಾಗಿ ನಿರ್ವಹಿಸಿದ್ದಕ್ಕಾಗಿ ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಅವರು ತಮ್ಮ ಪೊಲೀಸ್ ವಿಭಾಗವನ್ನು ಶ್ಲಾಘಿಸಿದ್ದಾರೆ.
icon

(8 / 9)

ವಿಜಯೋತ್ಸವದ ಮೆರವಣಿಗೆಯಲ್ಲಿ ಪ್ರೇಕ್ಷಕರನ್ನು ಸಮರ್ಥವಾಗಿ ನಿರ್ವಹಿಸಿದ್ದಕ್ಕಾಗಿ ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಅವರು ತಮ್ಮ ಪೊಲೀಸ್ ವಿಭಾಗವನ್ನು ಶ್ಲಾಘಿಸಿದ್ದಾರೆ.(PTI)

ಇಂದು ಮಳೆಯ ನಡುವೆ ಮರೈನ್ ಡ್ರೈವ್‌ನಲ್ಲಿ ಅಸಾಧಾರಣವಾದ ಜನಸಂದಣಿ ನಿರ್ವಹಣೆಗೆ ಮುಂಬೈ ಪೊಲೀಸ್​​ನ ನನ್ನ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವಿಶೇಷ ಮೆಚ್ಚುಗೆ ಎಂದು ಫನ್ಸಾಲ್ಕರ್ ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಬರೆದಿದ್ದಾರೆ.
icon

(9 / 9)

ಇಂದು ಮಳೆಯ ನಡುವೆ ಮರೈನ್ ಡ್ರೈವ್‌ನಲ್ಲಿ ಅಸಾಧಾರಣವಾದ ಜನಸಂದಣಿ ನಿರ್ವಹಣೆಗೆ ಮುಂಬೈ ಪೊಲೀಸ್​​ನ ನನ್ನ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವಿಶೇಷ ಮೆಚ್ಚುಗೆ ಎಂದು ಫನ್ಸಾಲ್ಕರ್ ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಬರೆದಿದ್ದಾರೆ.(PTI)


ಇತರ ಗ್ಯಾಲರಿಗಳು