ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sandalwood Museum: ಮೈಸೂರಿನಲ್ಲಿದೆ ದೇಶದ ಪ್ರಥಮ ಶ್ರೀಗಂಧ ಮ್ಯೂಸಿಯಂ, ಅರಣ್ಯ ಇಲಾಖೆಯಿಂದ ಮೃಗಾಲಯಕ್ಕೆ ಸದ್ಯವೇ ಸ್ಥಳಾಂತರ Photos

Sandalwood Museum: ಮೈಸೂರಿನಲ್ಲಿದೆ ದೇಶದ ಪ್ರಥಮ ಶ್ರೀಗಂಧ ಮ್ಯೂಸಿಯಂ, ಅರಣ್ಯ ಇಲಾಖೆಯಿಂದ ಮೃಗಾಲಯಕ್ಕೆ ಸದ್ಯವೇ ಸ್ಥಳಾಂತರ photos

  • Mysore News ಶ್ರೀಗಂಧದ ಮಹತ್ವ ಸಾರುವ ವಸ್ತು ಸಂಗ್ರಹಾಲಯ ಮೈಸೂರಿನಲ್ಲಿದೆ. ಅರಣ್ಯ ಇಲಾಖೆ ಆವರಣದಿಂದ ಮೈಸೂರು ಮೃಗಾಲಯಕ್ಕೆ ಸ್ಥಳಾಂತರವಾಗುತ್ತಿದೆ.

ಮೈಸೂರಿನಲ್ಲಿ ದೇಶದ ಪ್ರಥಮ ಶ್ರೀಗಂಧ ಮ್ಯೂಸಿಯಂ ನಾಲ್ಕು ವರ್ಷದ ಹಿಂದೆ ಕರ್ನಾಟಕ ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ಆರಂಭಗೊಂಡಿತು.
icon

(1 / 8)

ಮೈಸೂರಿನ ಅರಣ್ಯ ಭವನದ ಆವರಣದಲ್ಲಿರುವ ಶ್ರೀಗಂಧ ಮ್ಯೂಸಿಯಂ ನಲ್ಲಿ ಶ್ರೀಗಂಧದ ಹಲವು ಬಗೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
icon

(2 / 8)

ಕರ್ನಾಟಕವನ್ನು ಈಗಲೂ ಶ್ರೀಗಂಧದ ನಾಡು ಎಂದೇ ಕರೆಯಲಾಗುತ್ತದೆ. ಕರ್ನಾಟಕದ ಶ್ರೀಗಂಧಕ್ಕೆ ಈಗಲೂ ಮಹತ್ವವಿದೆ. ಇದನ್ನು ಮ್ಯೂಸಿಯಂ ತಿಳಿಸಲಿದೆ.
icon

(3 / 8)

ಕರ್ನಾಟಕದಲ್ಲಿ ಹಲವು ಬಗೆಯ ಶ್ರೀಗಂಧಗಳನ್ನು ಬೆಳೆಯಲಾಗುತ್ತದೆ. ಆ ತಳಿಗಳ ಪರಿಚಯವನ್ನು ಇಲ್ಲಿ ವಿಶೇಷವಾಗಿ ಮಾಡಲಾಗಿದೆ. 
icon

(4 / 8)

ನಾಲ್ಕು ವರ್ಷದ ಹಿಂದೆ ಮೈಸೂರು ಡಿಸಿಎಫ್‌ ಆಗಿದ್ದ ಐಎಫ್‌ಎಸ್‌ ಅಧಿಕಾರಿ ಕೆ.ಸಿ.ಪ್ರಶಾಂತಕುಮಾರ್‌ ವಿಶೇಷ ಆಸಕ್ತಿ ವಹಿಸಿ ಮ್ಯೂಸಿಯಂ ರೂಪಿಸಿದ್ದರು.
icon

(5 / 8)

ಈಗಲೂ ಮೈಸೂರು ಅರಣ್ಯ ಭವನ ಆವರಣಕ್ಕೆ ಆಗಮಿಸಿ ನಿತ್ಯ ಮ್ಯೂಸಿಯಂ ಅನ್ನು ವೀಕ್ಷಿಸಿ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ
icon

(6 / 8)

ಶ್ರೀಗಂಧ ಬೆಳೆ, ಅದರ ಮಹತ್ವ, ಏಕೆ ಬೆಳೆಯಬೇಕು. ಇದರಿಂ��� ರೈತರಿಗೆ ಸಿಗುವ ಸೌಲಭ್ಯಗಳ ಮಾಹಿತಿಯನ್ನು ನೀಡಲಾಗುತ್ತಿದೆ. ಸಚಿವರಾಗಿದ್ದ ಎಸ್.ಟಿ. ಸೋಮಶೇಖರ್‌ ಅವರು  ಶ್ರೀಗಂಧ ಮ್ಯೂಸಿಯಂ ಉದ್ಘಾಟಿಸಿ ವೀಕ್ಷಿಸಿದ್ದರು. ಡಿಎಫ್‌ಒಗಳಾದ ಪ್ರಶಾಂತ್‌ ಕುಮಾರ್‌, ಅಲೆಕ್ಸಾಂಡರ್‌ ಜತೆಗಿದ್ದರು.
icon

(7 / 8)

ಶ್ರೀಗಂಧ ಬೆಳೆ, ಅದರ ಮಹತ್ವ, ಏಕೆ ಬೆಳೆಯಬೇಕು. ಇದರಿಂದ ರೈತರಿಗೆ ಸಿಗುವ ಸೌಲಭ್ಯಗಳ ಮಾಹಿತಿಯನ್ನು ನೀಡಲಾಗುತ್ತಿದೆ. ಸಚಿವರಾಗಿದ್ದ ಎಸ್.ಟಿ. ಸೋಮಶೇಖರ್‌ ಅವರು  ಶ್ರೀಗಂಧ ಮ್ಯೂಸಿಯಂ ಉದ್ಘಾಟಿಸಿ ವೀಕ್ಷಿಸಿದ್ದರು. ಡಿಎಫ್‌ಒಗಳಾದ ಪ್ರಶಾಂತ್‌ ಕುಮಾರ್‌, ಅಲೆಕ್ಸಾಂಡರ್‌ ಜತೆಗಿದ್ದರು.

ಮೈಸೂರು ಶ್ರೀಗಂಧ ಮ್ಯೂಸಿಯಂ ಅನ್ನು ಹೆಚ್ಚು ಜನ ವೀಕ್ಷಿಸಲು ಅನುವಾಗಲೆಂದು ಈಗಿನ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಅರಣ್ಯ ಭವನದಿಂದ ಮೈಸೂರು ಮೃಗಾಲಯಕ್ಕೆ ಸ್ಥಳಾಂತರಿಸಲು ಸೂಚಿಸಿದ್ದು, ಸದ್ಯವೇ ಮೃಗಾಲಯದ ವಿಶೇಷ ಆಕರ್ಷಣೆಯಾಗಲಿದೆ. 
icon

(8 / 8)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು